ಸಹೋದರಿಯ ಚಿತೆಗೆ ಹಾರಿ ಸಹೋದರ ಆತ್ಮಹತ್ಯೆ..!!

(ನ್ಯೂಸ್ ಕಡಬ) newskadaba.com ಭೋಪಾಲ್, ಜೂ. 13. ಯುವಕನೋರ್ವ ಮಹಿಳೆಯ ಅಂತ್ಯಸಂಸ್ಕಾರದ ವೇಳೆ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

 

ಸಾಗರ ಜಿಲ್ಲೆಯ ಮಝಗಾವನ್ ಎಂಬ ಗ್ರಾಮದಲ್ಲಿ ಜ್ಯೋತಿ ದಾಗಾ ಎಂಬ ಮಹಿಳೆಯೋರ್ವರು ಬಾವಿಗೆ ಬಿದ್ದು ಮೃತಪಟ್ಟಿದ್ದು, ಅವರ ಅಂತ್ಯಸಂಸ್ಕಾರದ ವೇಳೆ‌ ಸಹೋದರ ಕಿರಣ್ ಎಂಬಾತ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಗ್ರಾಮ ಪಂಚಾಯತ್ ಸರಪಂಚ ಭರತ್ ಸಿಂಗ್ ಘೋಷಿಸಿದ್ದಾರೆ.

Scroll to Top