ಕ್ರೈಮ್ ನ್ಯೂಸ್

ಮನೆ ಸಮೀಪದ ಸ್ಮೋಕ್ ಹೌಸ್ ನಲ್ಲಿ ಭಾರೀ ಬೆಂಕಿ ಒಣಗಿಸಲು ಇಟ್ಟಿದ್ದ ರಬ್ಬರ್ ಸುಟ್ಟು ಭಸ್ಮ

(ನ್ಯೂಸ್ ಕಡಬ) newskadaba.com ಸೆ. 03. ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಎರಡು ರಬ್ಬರ್ ಸ್ಮೋಕ್ ಹೌಸ್ ಕಟ್ಟಡವು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸುಮಾರು 5-6 ಲಕ್ಷ ರೂಪಾಯಿ ನಷ್ಟ ಉಂಟಾದ ಘಟನೆ ಧರ್ಮಸ್ಥಳ ಗ್ರಾಮದ ಪೊಸೊಳಿಕೆ ಎಂಬಲ್ಲಿ ಸಂಭವಿಸಿದೆ.   ಸ್ಥಳೀಯ ನಿವಾಸಿ ಪಿ.ಕೆ. ಜೋಬ್ ಅವರಿಗೆ ಸೇರಿದ ಈ ಎರಡು ಸ್ಮೋಕ್ ಹೌಸ್ ಗಳಲ್ಲಿ ಬುಧವಾರ ಮುಂಜಾನೆ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನ ನಡೆಸಿದರೂ, ಎರಡೂ ಕಟ್ಟಡಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ […]

ಮನೆ ಸಮೀಪದ ಸ್ಮೋಕ್ ಹೌಸ್ ನಲ್ಲಿ ಭಾರೀ ಬೆಂಕಿ ಒಣಗಿಸಲು ಇಟ್ಟಿದ್ದ ರಬ್ಬರ್ ಸುಟ್ಟು ಭಸ್ಮ Read More »

ಕರಾವಳಿ, ಕ್ರೈಮ್ ನ್ಯೂಸ್
Death, deadbody, Waterfall

ಸುಳ್ಯ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಆ. 30. ಕಳೆದೆರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಆಲೆಟ್ಟಿ ಗ್ರಾಮದ ಕುದ್ಕುಳಿಯ ನಿವಾಸಿ ಗಿರೀಶ್ ಎಂಬವರ ಮೃತದೇಹವು ಇಂದು(ಭಾನುವಾರದಂದು) ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿದೆ.   ಮನೆಯಿಂದ ಹುಲ್ಲು ತರಲೆಂದು ಹೋಗಿದ್ದ ಗಿರೀಶ್ ಬಳಿಕ ನಾಪತ್ತೆಯಾಗಿದ್ದರು. ಹುಡುಕಾಟದ ವೇಳೆ ಬಪಯಸ್ವಿನಿ ನದಿ ತಟದಲ್ಲಿಅವರ ಕೊಡೆ ಮತ್ತು ಕತ್ತಿ ಪತ್ತೆಯಾಗಿದ್ದು, ಬಳಿಕ ಪೊಲೀಸ್ ದೂರು ನೀಡಲಾಗಿತ್ತು.   ಸುಳ್ಯ ಪೋಲಿಸ್ ಇಲಾಖೆಯವರ ನೇತೃತ್ವದಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಯವರು ಕಳೆದ ಎರಡು ದಿನಗಳಿಂದ ಹುಡುಕಾಟದಲ್ಲಿ ನಿರತರಾಗಿದ್ದರು.

ಸುಳ್ಯ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ವಿಮಾನ ಅಪಘಾತದಲ್ಲಿ ಉಡುಪಿ ಮೂಲದ ತರಬೇತಿ ಪೈಲಟ್ ಮೃತ್ಯು!!

(ನ್ಯೂಸ್ ಕಡಬ) newskadaba.com ಆ. 28. ಖಾಸಗಿ ತರಬೇತಿ ವಿಮಾನ ಅಪಘಾತ ಸಂಭವಿಸಿದ ಪರಿಣಾಮ ಉಡುಪಿ ಮೂಲದ ತರಬೇತಿ ಪೈಲಟ್ ಓರ್ವ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.   ಮೃತ ಯುವಕನನ್ನು ಅಭಿಷೇಕ್ ಪೂಜಾರಿ(22) ಎಂದು ಗುರುತಿಸಲಾಗಿದೆ. ಅಭಿಷೇಕ್ ಪೂಜಾರಿಯವರು ಮೂಲತಃ ಉಡುಪಿ ಜಿಲ್ಲೆಯ ಕಣಜಾರು ಗ್ರಾಮದ ಕಾಡೆಬರ್ಕೆ ನಿವಾಸಿ. ವರದಿಯ ಪ್ರಕಾರ, ಅವರು ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಉತ್ತರ ಪ್ರದೇಶದ ಕಾನ್ಪುರದಲ್ಲಿ ಖಾಸಗಿ ತರಬೇತಿ ಪೈಲಟ್ ಆಗಿ ತರಬೇತಿ ಪಡೆಯುತ್ತಿದ್ದರು. ಅಭಿಷೇಕ್

ವಿಮಾನ ಅಪಘಾತದಲ್ಲಿ ಉಡುಪಿ ಮೂಲದ ತರಬೇತಿ ಪೈಲಟ್ ಮೃತ್ಯು!! Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್
Theft, crime, Robbery

ಕಡಬ: ಪಟ್ಟಣ ಪಂಚಾಯತ್ ಅಧ್ಯಕ್ಷರ ಮನೆಯಿಂದಲೇ ಹಣ ಕಳ್ಳತನ- ದೂರು ದಾಖಲು

(ನ್ಯೂಸ್ ಕಡಬ) newskadaba.com ಆ. 28. ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಡ್ಡಗದ್ದೆಯ ಮನೆಯೊಂದರಿಂದ 84,800 ರೂ. ನಗದು ಕಳ್ಳತನವಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   ಈ ಸಂಬಂಧ ಕಡಬ ಗ್ರಾಮ ನಿವಾಸಿ ತಮನ್ನಾ ಜಬೀನ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.   ದೂರುದಾರರ ಪ್ರಕಾರ, ಪಿರ್ಯಾದುದಾರರು ತಮ್ಮ ಗಂಡ, ಮಕ್ಕಳು ಹಾಗೂ ಕುಟುಂಬ ಸದಸ್ಯರೊಂದಿಗೆ ಅಡ್ಡಗದ್ದೆಯಲ್ಲಿರುವ ಮನೆಯಲ್ಲಿ ವಾಸವಾಗಿದ್ದು, ತಮ್ಮ ರೂಮ್‌ನಲ್ಲಿದ್ದ ಮರದ ಬಾಕ್ಸ್‌ನಲ್ಲಿ ಹಣವನ್ನು ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ. ಆಗಸ್ಟ್ 18ರಂದು

ಕಡಬ: ಪಟ್ಟಣ ಪಂಚಾಯತ್ ಅಧ್ಯಕ್ಷರ ಮನೆಯಿಂದಲೇ ಹಣ ಕಳ್ಳತನ- ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ನಿಲ್ಲಿಸಿದ್ದ ಟಿಟಿ ಮೇಲೆ ಲಾರಿ ಪಲ್ಟಿ- ಮೂವರು ಗಂಭೀರ

(ನ್ಯೂಸ್ ಕಡಬ) newskadaba.com ಆ. 27. ಲಾರಿಯೊಂದು ನಿಯಂತ್ರಣ ತಪ್ಪಿ ನಿಂತಿದ್ದ ಟೆಂಪೋ ಟ್ರಾವೆಲರ್ (ಟಿಟಿ) ಮೇಲೆ ಉರುಳಿ ಬಿದ್ದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಅರಂತೋಡಿನ ದೇವರಕೊಲ್ಲಿ ಬಳಿ ಬುಧವಾರ ಸಂಜೆ ನಡೆದಿದೆ. ಮೂಲಗಳ ಪ್ರಕಾರ, ಗುಜರಾತ್‌ ಅಹಮದಾಬಾದ್‌ನ ಪ್ರವಾಸಿಗರ ಗುಂಪೊಂದು ಮಡಿಕೇರಿಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದಾಗ ದೇವರಕೊಲ್ಲಿ ಅಬ್ಬಿ ಜಲಪಾತದ ಬಳಿ ರಸ್ತೆಬದಿಯಲ್ಲಿ ತಮ್ಮ ಟಿಟಿ ವಾಹನವನ್ನು ನಿಲ್ಲಿಸಿದ್ದಾಗ ಈ ಅಪಘಾತ ಸಂಭವಿಸಿದೆನ್ನಲಾಗಿದೆ. ಸುಳ್ಯದ ಕಡೆಗೆ ಚಲಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿ

ನಿಲ್ಲಿಸಿದ್ದ ಟಿಟಿ ಮೇಲೆ ಲಾರಿ ಪಲ್ಟಿ- ಮೂವರು ಗಂಭೀರ Read More »

ಕರಾವಳಿ, ಕ್ರೈಮ್ ನ್ಯೂಸ್

ಇಟ್ಟಿಗೆಗೂಡು ಕುಸಿದು ಮೂವರು ಕಾರ್ಮಿಕರು ಮೃತ್ಯು!!

(ನ್ಯೂಸ್ ಕಡಬ) newskadaba.com ಆ. 03. ಇಟ್ಟಿಗೆಗೂಡು ಕುಸಿದು ಬಿಸಿ ಇಟ್ಟಿಗೆ ಮತ್ತು ಉರಿಯುತ್ತಿದ್ದ ಬೆಂಕಿಯ ಬೂದಿಯ ಅಡಿಯಲ್ಲಿ ಸಿಲುಕಿ ಮೂವರು ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಬೂದನಹಳ್ಳಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.   ಮೃತಪಟ್ಟ ಕಾರ್ಮಿಕರನ್ನು ಬೂದಹಳ್ಳಿ ಗ್ರಾಮದ ರಾಜೇಶ್ (32), ನಾರಾಯಣ(53) ಮತ್ತು ನಾಗರಾಜ್ (62) ದುರಂತದಲ್ಲಿ ಎಂದು ಗುರುತಿಸಲಾಗಿದೆ. ಶನಿವಾರ ಬೆಳಗ್ಗೆ 6 ಗಂಟೆಗೆ ರಾಜೇಶ್, ನಾರಾಯಣ ಹಾಗೂ ನಾಗರಾಜು ಕೆಲಸಕ್ಕೆ ತೆರಳಿದ್ದರು. ಇಟ್ಟಿಗೆ ಬೇಯಿಸಲು ಹಾಕಿದ್ದ

ಇಟ್ಟಿಗೆಗೂಡು ಕುಸಿದು ಮೂವರು ಕಾರ್ಮಿಕರು ಮೃತ್ಯು!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಳೆಯ ಅಬ್ಬರಕ್ಕೆ ಗುಡ್ಡ ಕುಸಿತ ಮಗು ಸಹಿತ ಮೂವರು ದುರಂತ ಅಂತ್ಯ

(ನ್ಯೂಸ್ ಕಡಬ) newskadaba.com ಆ. 02. ತೀವ್ರ ಮಳೆಯಿಂದಾಗಿ ಗುಡ್ಡ ಕುಸಿದು ಮೂವರು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ತೀರ್ಥಹಳ್ಳಿಯ ಇಂದಿರಾ ನಗರದಲ್ಲಿ ರವಿವಾರದಂದು ಬೆಳಗಿನ ಜಾವ 2:30ರ ವೇಳೆ ನಡೆದಿದೆ. ಮೃತಪಟ್ಟವರನ್ನು ಕೊಪ್ಪಳ ಜಿಲ್ಲೆಯ ಗಂಗಾವತಿಯ ಕೊಕ್ಕರೆಗಾರು ಗ್ರಾಮದ ಮೂಲದ ಮಲ್ಲಿಕಾರ್ಜುನ, ನಾಗವೇಣಿ ಮತ್ತು ಸಂತೋಷ (3) ಎಂದು ಗುರುತಿಸಲಾಗಿದೆ. ಮಳೆಯ ತೀವ್ರತೆ ಹೆಚ್ಚಿದ್ದದರಿಂದ ಗುಡ್ಡ ಕುಸಿದಿದ್ದು, ಕೆಳಭಾಗದಲ್ಲಿ ಶೆಡ್ ನಿರ್ಮಾಣ ಮಾಡಿಕೊಂಡು ವಾಸ ಮಾಡುತ್ತಿದ್ದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೂವರ ಮೃತದೇಹಗಳು

ಮಳೆಯ ಅಬ್ಬರಕ್ಕೆ ಗುಡ್ಡ ಕುಸಿತ ಮಗು ಸಹಿತ ಮೂವರು ದುರಂತ ಅಂತ್ಯ Read More »

ಕರ್ನಾಟಕ, ಕ್ರೈಮ್ ನ್ಯೂಸ್

ರೆಖ್ಯ: ಕಾಡಾನೆ ದಾಳಿ- ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ. 02. ಕಾಡಾನೆ ದಾಳಿಗೆ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ನೇಲಡ್ಕ ಸಮೀಪದ ಮುಚ್ಚಿರಡ್ಕ ಎಂಬಲ್ಲಿ ಶನಿವಾರದಂದು ಸಂಜೆ ಸಂಭವಿಸಿದೆ. ಮೃತರನ್ನು ಇಡ್ಮಾಲು ನಿವಾಸಿ ಬಾಲಕೃಷ್ಣ ಗೌಡ (55) ಎಂದು ಗುರುತಿಸಲಾಗಿದೆ. ಎಂದಿನಂತೆ ಕೆಲಸಕ್ಕೆ ತೆರಳಿದ್ದ ಇವರು ಕೆಲಸ ಮುಗಿಸಿ ಸಂಜೆ ಮನೆಗೆ ಮರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಸಂಜೆ ಆದರೂ ಅವರು ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಹಾಗೂ ಸ್ಥಳೀಯರು ಹುಡುಕಾಟ

ರೆಖ್ಯ: ಕಾಡಾನೆ ದಾಳಿ- ಓರ್ವ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಕೊಕ್ಕಡ: ಆಟೋರಿಕ್ಷಾ ಮೇಲೆ ಬಿದ್ದ ಮರ!!

(ನ್ಯೂಸ್ ಕಡಬ) newskadaba.com ಕಡಬ, ಆ. 01. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಶುಕ್ರವಾರದಿಂದ ಭಾರೀ ಗಾಳಿ ಮಳೆಯಾಗುತ್ತಿದ್ದು, ಅಲ್ಲಲ್ಲಿ ಅನಾಹುತಗಳು ನಡೆಯುತ್ತಿರುವ ಕುರಿತು ಕೇಳಿಬರುತ್ತಿದೆ. ಅದೇರೀತಿ ಆಟೋ ರಿಕ್ಷಾದ ಮೇಲೆ ಮರವೊಂದು ಬಿದ್ದ ಪರಿಣಾಮ ರಿಕ್ಷಾ ನಜ್ಜುಗುಜ್ಜಾದ ಘಟನೆ ಕಡಬ ತಾಲೂಕಿನ ಕೊಕ್ಕಡ ಎಂಬಲ್ಲಿ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಕೊಕ್ಕಡ: ಆಟೋರಿಕ್ಷಾ ಮೇಲೆ ಬಿದ್ದ ಮರ!! Read More »

ಕರಾವಳಿ, ಕ್ರೈಮ್ ನ್ಯೂಸ್

ಸುಳ್ಯ ತಾಲೂಕಿನಾದ್ಯಂತ ವಿಪರೀತ ಮಳೆ ಬಾಳುಗೋಡು ಸೇತುವೆ ಮುಳುಗಡೆ

(ನ್ಯೂಸ್ ಕಡಬ) newskadaba.com ಜು. 31. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಾದ್ಯಂತ ಇಂದು ಮಧ್ಯಾಹ್ನದ ನಂತರ ಭಾರೀ ಗಾಳಿ ಮಳೆಯಾಗಿದ್ದು, ಹಲವೆಡೆ ಮಳೆರಾಯ ಅಬ್ಬರಿಸಿದ್ದಾನೆ. ಸುಬ್ರಹ್ಮಣ್ಯ, ಬಾಳುಗೋಡು, ಹರಿಹರ, ಬಲ್ಪ, ಗುತ್ತಿಗಾರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಗ್ರಾಮೀಣ ಪ್ರದೇಶದ ಹೊಳೆಗಳು, ತೋಡುಗಳು ಭರ್ತಿಯಾಗಿ ತುಂಬಿ ಹರಿಯುತ್ತಿವೆ. ಶುಕ್ರವಾರ ಮಧ್ಯಾಹ್ನದ ನಂತರ ಮಳೆಯು ಸುದೀರ್ಘ ಗಂಟೆಗಳ ಕಾಲ ಸುರಿದ ಕಾರಣ ತಗ್ಗು ಪ್ರದೇಶಗಳಲ್ಲಿ ನೀರಿನ ಪ್ರಮಾಣ ಹಠಾತ್ತನೆ ಏರಿಕೆಯಾಗಿದೆ. ಪ್ರಮುಖವಾಗಿ ಬಾಳುಗೋಡಿನಲ್ಲಿ ಈ

ಸುಳ್ಯ ತಾಲೂಕಿನಾದ್ಯಂತ ವಿಪರೀತ ಮಳೆ ಬಾಳುಗೋಡು ಸೇತುವೆ ಮುಳುಗಡೆ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top