ಎಳೆಯ ಮಗುವನ್ನು ರಸ್ತೆಗೆದು ಮಹಿಳೆಯ ಅತ್ಯಾಚಾರ

(ನ್ಯೂಸ್ ಕಡಬ) newskadaba.com ಗುರುಗಾಂವ್, ಜೂ.6. ಆಟೊದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ತೋಳಲ್ಲಿದ್ದ ಮಗುವನ್ನು ಬಲಾತ್ಕಾರವಾಗಿ ಕಿತ್ತುಕೊಂಡು ರಸ್ತೆಗೆ ಎಸೆದು, ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪೈಶಾಚಿಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಸ್ತೆಗೆ ಎಸೆಯಲ್ಪಟ್ಟ ಎಂಟು ತಿಂಗಳ ಹೆಣ್ಣು ಮಗು ಮೃತಪಟ್ಟಿದೆ.

ಮೇ 29ರಂದು ಮಧ್ಯರಾತ್ರಿ ಘಟನೆ ನಡೆದಿದ್ದು, ಮೂವರು ಆರೋಪಿಗಳ ವಿರುದ್ಧ ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಹತ್ಯೆ ಮತ್ತು ಲೈಂಗಿಕ ಕಿರುಕುಳ ಪ್ರಕರಣವನ್ನು ಮೇ 30ರಂದು ದಾಖಲಿಸಲಾಗಿತ್ತು. ನೆರೆಮನೆಯವರ ಜತೆ ಜಗಳವಾದ ಹಿನ್ನೆಲೆಯಲ್ಲಿ ಮಧ್ಯರಾತ್ರಿ 23 ವರ್ಷದ ಮಹಿಳೆ ಆಟೊ ಹಿಡಿದು ತವರು ಮನೆಗೆ ಹೊರಟಿದ್ದಳು. ಆಟೊ ಹತ್ತಿದ ತಕ್ಷಣ ಮೂವರು ಲೈಂಗಿಕ ಕಿರುಕುಳ ನೀಡಲು ಆರಂಭಿಸಿದರು. ಆಕೆ ಪ್ರತಿರೋಧ ಒಡ್ಡಿ, ಜೋರಾಗಿ ಕಿರುಚಿಕೊಂಡಾಗ ಮಗು ಕೂಡಾ ಅಳಲು ಆರಂಭಿಸಿತು. ಮಗುವನ್ನು ಕೈಯಿಂದ ಎಳೆದುಕೊಂಡು ರಸ್ತೆಗೆ ಎಸೆದರು. ಅಸಹಾಯಕಳಾದ ಆಕೆಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

error: Content is protected !!
Scroll to Top