ಬಿಎಸ್ಎಫ್ ಕಾರ್ಯಾಚರಣೆ: 4 ಲಕ್ಷ ಮುಖಬೆಲೆಯ ನಕಲಿ ನೋಟುಗಳ ವಶ

(ನ್ಯೂಸ್ ಕಡಬ) newskadaba.com ಮಾಲ್ಡಾ, ಜೂ.4. ನೂತನ 2 ಸಾವಿರ ರೂ. ಮುಖಬೆಲೆಯ 4,98,000 ನಕಲಿ ನೋಟುಗಳನ್ನು ಗಡಿಭದ್ರತಾ ಪಡೆ ವಶಪಡಿಸಿಕೊಂಡಿದೆ.

ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಬಿಎಸ್ ಎಫ್ ಭಾರತ-ಬಾಂಗ್ಲಾ ಗಡಿಪ್ರದೇಶದಿಂದ ಈ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದು, ಕಾರ್ಯಾಚರಣೆಯ ವೇಳೆ ಕತ್ತಲಾಗಿದ್ದರಿಂದ ದಂಧೆಕೋರರು ಪರಾರಿಯಾಗಿದ್ದಾರೆ. ವಶಪಡಿಸಿಕೊಂಡಿರುವ ನೋಟುಗಳನ್ನು ಕಲಿಯಾಚಕ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ತನಿಖೆ ನಡೆಯುತ್ತಿದೆ.

error: Content is protected !!
Scroll to Top