
(ನ್ಯೂಸ್ ಕಡಬ) newskadaba.com, ನ .28 . ಚಿನ್ನದ ದರದಲ್ಲಿ ಇಂದು ಕೊಂಚ ಇಳಿಕೆ ಕಂಡುಬಂದಿದೆ. 22 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ 50 ರೂ. ಇಳಿಕೆಯಾಗಿದ್ದು, 11,720 ರೂ.ಗೆ ತಲುಪಿದೆ. ಇನ್ನು 24 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ 54 ರೂ. ಇಳಿಕೆಯಾಗಿದ್ದು, 12,786 ರೂ. ಆಗಿದೆ.ಇಂದಿನ ದರದ ಪ್ರಕಾರ, 22 ಕ್ಯಾರಟ್ ಚಿನ್ನದ 8 ಗ್ರಾಂಗೆ 93,760 ರೂ. ಪಾವತಿಸಬೇಕಾಗಿದ್ದು, 10 ಗ್ರಾಂಗೆ 1,17,200 ರೂ. ಹಾಗೂ 100 ಗ್ರಾಂಗೆ 11,72,000 ರೂ. ಆಗಿದೆ.
ಇನ್ನು 24 ಕ್ಯಾರಟ್ ಚಿನ್ನದ 8 ಗ್ರಾಂಗೆ 1,02,288 ರೂ. ಇದ್ದರೆ, 10 ಗ್ರಾಂಗೆ 1,27,860 ರೂ. ಹಾಗೂ 100 ಗ್ರಾಂಗೆ 12,78,600 ರೂ. ದರ ನಿಗದಿಯಾಗಿದೆ.ಬೆಳ್ಳಿ ದರ ಯಥಾಸ್ಥಿತಿ ಮುಂದುವರಿದಿದ್ದು, 1 ಗ್ರಾಂಗೆ 170 ರೂ., 10 ಗ್ರಾಂಗೆ 1,700 ರೂ. ಹಾಗೂ 1 ಕೆ.ಜಿ. ಬೆಳ್ಳಿಗೆ 1,70,000 ರೂ. ಇದೆ.




