ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವುದೇ ನನ್ನ ಮುಖ್ಯ ಗುರಿ: ಕ್ರೀಡಾಪಟು ಎಂ.ಆರ್. ಪೂವಮ್ಮ

(ನ್ಯೂಸ್‌ ಕಡಬ) newskadaba.com,  ಅ. 03. ಮಂಗಳೂರು: ಬದುಕಿನಲ್ಲಿ ಅನೇಕ ಏಳು-ಬೀಳು ಹಾಗೂ ಗಾಯದ ಸಮಸ್ಯೆಗಳನ್ನು ಎದುರಿಸಿ ಸೋತು ಗೆದ್ದಿದ್ದೇನೆ. ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ; ಮುಂದಿನ ಏಷ್ಯನ್ ಗೇಮ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಗೆಲ್ಲುವುದೇ ನನ್ನ ಮುಖ್ಯ ಗುರಿ ಎಂದು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಕ್ರೀಡಾಪಟು ಎಂ.ಆರ್. ಪೂವಮ್ಮ ಹೇಳಿದರು.

ಏಷ್ಯನ್ ಗೇಮ್ಸ್‌ನ $4 \times 400$ ಮೀ. ಮಹಿಳೆಯರ ರಿಲೇಯಲ್ಲಿ ಚಿನ್ನ ಹಾಗೂ $4 \times 400$ ಮೀ. ಮಿಶ್ರ ರಿಲೇ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ಮಂಗಳೂರಿಗೆ ಆಗಮಿಸಿದ ಅವರನ್ನು ಸಿಟಿ ಸೆಂಟರ್ ಮಾಲ್‌ನಲ್ಲಿ ‘ಮೊಹ್ತಿಶ್ಯಾಂ’ ಹಾಗೂ ‘ಸಿಟಿ ಸೆಂಟರ್’ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕ್ರೀಡಾ ಪಯಣದ ಅನುಭವಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಪೂವಮ್ಮ ಅವರ ತಾಯಿ ಜಾಜಿ ರಾಜು, ತಂದೆ ಎಂ.ಜಿ. ರಾಜು, ಪತಿ ಜಿತಿನ್ ಪಾಲ್, ತರಬೇತುದಾರ ದಿನೇಶ್ ಕುಂದರ್, ಮೊಹ್ತಿಶ್ಯಾಂ ಸಂಸ್ಥೆಯ ನಿರ್ದೇಶಕರಾದ ಸೈಯದ್ ಮುಹಮ್ಮದ್ ಅರ್ಶದ್, ಸೈಯದ್ ಮುಹಮ್ಮದ್ ಸವೊದ್, ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ, ಮುಡಾ ಮಾಜಿ ಅಧ್ಯಕ್ಷ ತೇಜೋಮಯ ಹಾಗೂ ದಾಯ್ಜಿವರ್ಲ್ಡ್ ಮಾಧ್ಯಮದ ಅಲೆಕ್ಸ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Scroll to Top