
(ನ್ಯೂಸ್ ಕಡಬ) newskadaba.com, ಅ. 29 . ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 20ನೇ ಸಾಲಿನ ದ್ವಿತೀಯ ಪಿಯುಸಿ ಹಾಗೂ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ-1 ಮತ್ತು ಪರೀಕ್ಷೆ-2ರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 2027ರ ಪರೀಕ್ಷೆ-1 ಫೆಬ್ರವರಿ 27 ರಿಂದ ಮಾರ್ಚ್ 18, 2027ರವರೆಗೆ ನಡೆಯಲಿದೆ
.ಫೆ. 27 ರಂದು ಕನ್ನಡ/ಅರೇಬಿಕ್ ಪರೀಕ್ಷೆಯೊಂದಿಗೆ ಆರಂಭವಾಗಿ, ಮಾರ್ಚ್ 18 ರಂದು ಇತಿಹಾಸ ಪರೀಕ್ಷೆಯೊಂದಿಗೆ ಮುಕ್ತಾಯಗೊಳ್ಳಲಿದೆ.ಪರೀಕ್ಷೆ-2: ಮೇ 03 ರಿಂದ ಮೇ 15, 2027ರವರೆಗೆ ನಡೆಯಲಿದೆ.ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ 2027 ರ ಪರೀಕ್ಷೆ-1: ಮಾರ್ಚ್ 22 ರಿಂದ ಏಪ್ರಿಲ್ 05, 2027ರವರೆಗೆ ನಡೆಯಲಿದೆ.ಮಾರ್ಚ್ 22 ರಂದು ಪ್ರಥಮ ಭಾಷಾ ಪರೀಕ್ಷೆಯಿಂದ ಆರಂಭವಾಗಿ, ಏಪ್ರಿಲ್ 05 ರಂದು ಸಮಾಜ ವಿಜ್ಞಾನ ಪರೀಕ್ಷೆಯೊಂದಿಗೆ ಪೂರ್ಣಗೊಳ್ಳಲಿದೆ.
ಪರೀಕ್ಷೆ-2: ಮೇ 24 ರಿಂದ ಮೇ 31, 2027ರವರೆಗೆ ನಡೆಯಲಿದೆ.




