
(ನ್ಯೂಸ್ ಕಡಬ) newskadaba.com, ಅ. 29 . ರಾಜ್ಯದ ಅನುದಾನರಹಿತ ಖಾಸಗಿ ಶಾಲೆಗಳು ಸೇರಿದಂತೆ ಎಲ್ಲಾ ಶಾಲೆಗಳಲ್ಲಿ ಈ ಬಾರಿ ನವೆಂಬರ್ 1ರಂದು 70ನೇ ಕನ್ನಡ ರಾಜ್ಯೋತ್ಸವವನ್ನು ಕಡ್ಡಾಯವಾಗಿ ಆಚರಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆ ಹೊರಡಿಸಿದೆ.
ಈ ವರ್ಷ ನವೆಂಬರ್ 1 ರಂದು ಭಾನುವಾರ ಬಂದಿರುವುದರಿಂದ ಇಲಾಖೆಯ ಈ ನಿರ್ದೇಶನಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರಲ್ಲಿ ಗೊಂದಲ ಮೂಡಿದೆ.
“ಐದು ತಿಂಗಳ ಸುದೀರ್ಘ ಎಸ್ಐಆರ್ ಕಾರ್ಯದ ಬಳಿಕ ಶಿಕ್ಷಕರಿಗೆ ಭಾನುವಾರದ ರಜೆ ಸಿಗುತ್ತಿದೆ. ಅಲ್ಲದೆ, ಭಾನುವಾರ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಕೂಡ ಸಿದ್ಧರಿಲ್ಲ” ಎಂದು ಬೆಂಗಳೂರಿನ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕರೊಬ್ಬರು ತಿಳಿಸಿದ್ದಾರೆ.




