ಬೆಳ್ತಂಗಡಿ: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ. 13. ಉಜಿರೆ ಗ್ರಾಮದ ಗುರಿಪಳ್ಳ ಕ್ರಾಸ್‌ನಲ್ಲಿರುವ ಬಸ್ಸು ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

 

ಮೃತರು ಕಡುನೀಲಿ ಬಣ್ಣದ ಪ್ಯಾಂಟ್‌ ಹಾಗೂ ಆಕಾಶ ನೀಲಿ ಬಣ್ಣದ ಪ್ರಿಂಟೆಡ್ ಟೀ ಶರ್ಟ್‌ ಧರಿಸಿದ್ದಾರೆ. ಅನಾರೋಗ್ಯದಿಂದ ಅಥವಾ ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮೃತದೇಹವನ್ನು ಬೆಳ್ತಂಗಡಿ ಶವಾಗಾರದಲ್ಲಿ ಇರಿಸಲಾಗಿದ್ದು, ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Scroll to Top