(ನ್ಯೂಸ್ ಕಡಬ) newskadaba.com ಜು. 15. ಒಡಿಶಾದ ಬೋಲಾಂಗಿರ್ ಜಿಲ್ಲೆಯಲ್ಲಿ ನಡೆದ ಪತ್ನಿಯ ಹಲ್ಲೆಯಿಂದ ಪತಿ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿದ್ದ ಪ್ರಕರಣವು ಇದೀಗ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿ ಸತ್ಯಾಸತ್ಯತೆಯನ್ನು ಹೊರಹಾಕಿದೆ.
ಘಟನೆಯ ಹಿನ್ನೆಲೆ: ದಂಪತಿ ನಡುವೆ ನಡೆದ ಜಗಳದ ವೇಳೆ, ಕೋಪಗೊಂಡ ಪತ್ನಿ ತನ್ನ ಮೊಬೈಲ್ ಫೋನ್‌ನಿಂದ ಪತಿಯ ತಲೆಗೆ ಬಲವಾಗಿ ಹೊಡೆದಿದ್ದಳು. ಇದರಿಂದ ಗಾಯಗೊಂಡಿದ್ದ ಪತಿಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಯ ನಂತರ ಮನೆಗೆ ಕರೆತರಲಾಗಿತ್ತು. ಆದರೆ, ಮನೆಗೆ ಬಂದ ಕೆಲವೇ ಸಮಯದಲ್ಲಿ ಅವರು ಮೃತಪಟ್ಟಿದ್ದರು.
ಬಳಿಕದ ಬೆಳವಣಿಗೆಯಲ್ಲಿ ಪತ್ನಿಯ ಹಲ್ಲೆಯಿಂದಲೇ ಪತಿ ಮೃತಪಟ್ಟಿದ್ದಾರೆ ಎಂದು ಮೃತನ ಕುಟುಂಬಸ್ಥರು ಆಕೆಯ ಮೇಲೆ ಗಂಭೀರ ಆರೋಪ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ವೈದ್ಯರು ಸಾವಿಗೆ ಅಸಲಿ ಕಾರಣವನ್ನು ದೃಢಪಡಿಸಿದ್ದಾರೆ. ಮೃತ ವ್ಯಕ್ತಿಯ ದೇಹದಲ್ಲಿ ಹಲ್ಲೆಯ ಯಾವುದೇ ಗಂಭೀರ ಗುರುತುಗಳಿಲ್ಲ. ಬದಲಿಗೆ, ಅತಿಯಾದ ಮದ್ಯಪಾನದಿಂದಾಗಿ ಲಿ










