
(ನ್ಯೂಸ್ ಕಡಬ) newskadaba.com, ನ. 11 . ದೀಪಾವಳಿ ಸಂಭ್ರಮದ ನಡುವೆ ದುಬೈನಲ್ಲಿ ಚಿನ್ನ ಮತ್ತು ನೈಜ ವಜ್ರಗಳಿಂದ ನಿರ್ಮಿಸಲಾದ ವಿಶಿಷ್ಟ ರಂಗೋಲಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಸಿಟಿ ಸೆಂಟರ್ ದೈರಾದಲ್ಲಿ ಪ್ರದರ್ಶಿಸಲಾದ ಈ ಬೃಹತ್ ಗೋಲ್ಡನ್ ರಂಗೋಲಿಯನ್ನು ದಾಮಾಸ್ ಸಂಸ್ಥೆಯು ದುಬೈ ಫೆಸ್ಟಿವಲ್ಸ್ ಅಂಡ್ ರಿಟೇಲ್ ಎಸ್ಟಾಬ್ಲಿಷ್ಮೆಂಟ್ ಸಹಯೋಗದಲ್ಲಿ ಸಿದ್ಧಪಡಿಸಿದೆ.
ಈ ಕಲಾಕೃತಿಗೆ 6.5 ಕೆ.ಜಿ. ತೂಕದ 213 ಚಿನ್ನದ ಆಭರಣಗಳು ಹಾಗೂ 380ಕ್ಕೂ ಹೆಚ್ಚು ಕ್ಯಾರೆಟ್ನ ನೈಜ ವಜ್ರಗಳನ್ನು ಬಳಸಲಾಗಿದೆ. ಸುಮಾರು 10 ನುರಿತ ಶಿಲ್ಪಿಗಳು ಬರೋಬ್ಬರಿ 16 ಗಂಟೆಗಳ ಕಾಲ ಶ್ರಮಿಸಿ ಈ ಅದ್ಭುತ ರಂಗೋಲಿಯನ್ನು ಕೈಯಿಂದಲೇ ನಿರ್ಮಿಸಿದ್ದಾರೆ. ಈ ಐಷಾರಾಮಿ ಕಲಾಕೃತಿಗೆ ವಿಶ್ವದಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.




