ಫಿಫಾ ವಿಶ್ವಕಪ್ ಕ್ರೇಜ್ – ತಡರಾತ್ರಿ 3.30ರ ವರೆಗೆ ಹೋಟೆಲ್, ರೆಸ್ಟೋರೆಂಟ್ ತೆರೆಯಲು ಸರ್ಕಾರ ಗ್ರೀನ್ ಸಿಗ್ನಲ್!



(ನ್ಯೂಸ್ ಕಡಬ) newskadaba.com ಜು. 15. ಬೆಂಗಳೂರಿನ ಫುಟ್ಬಾಲ್ ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದ್ದು ಫಿಫಾ ವಿಶ್ವಕಪ್ ಪಂದ್ಯಗಳ ನೇರ ಪ್ರಸಾರ ವೀಕ್ಷಣೆಗೆ ಅನುಕೂಲವಾಗುವಂತೆ ನಗರದ ಹೋಟೆಲ್ ಮತ್ತು ರೆಸ್ಟೋರೆಂಟ್ಗಳನ್ನು ರಾತ್ರಿ 3:30 ರ ವರೆಗೆ ತೆರೆಯಲು ಸರ್ಕಾರ ವಿಶೇಷ ಅನುಮತಿ ನೀಡಿದೆ.







ರಾಷ್ಟ್ರೀಯ ರೆಸ್ಟೋರೆಂಟ್ ಅಸೋಸಿಯೇಷನ್ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ. ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ವಿಷಯವನ್ನು ಹಂಚಿಕೊಂಡಿದ್ದಾರೆ.






ಇಂದು ನಡೆಯಲಿರುವ ಸೆಮಿಫೈನಲ್ ಪಂದ್ಯ ಸೇರಿದಂತೆ, ನಾಳೆ ಹಾಗೂ ಜುಲೈ 19 ರಂದು ನಡೆಯುವ ಪಂದ್ಯಗಳಿಗೆ ಮಾತ್ರ ತಡರಾತ್ರಿ ವಿನಾಯಿತಿ ಅನ್ವಯಿಸಲಿದೆ.

ಈಗಾಗಲೇ ನಗರದ ಪ್ರಮುಖ ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ಪಂದ್ಯ ವೀಕ್ಷಿಸಲು ದೊಡ್ಡ ಸ್ಕ್ರೀನ್ಗಳನ್ನು ಅಳವಡಿಸಲಾಗಿದೆ. ತಡರಾತ್ರಿ ರೆಸ್ಟೋರೆಂಟ್ಗಳಲ್ಲಿ ಉಳಿಯುವ ಗ್ರಾಹಕರ ಸುರಕ್ಷತೆಗಾಗಿ ಕ್ಯಾಬ್ ವ್ಯವಸ್ಥೆ ಕಲ್ಪಿಸುವಂತೆ ಹೋಟೆಲ್ ಮತ್ತು ರೆಸ್ಟೋರೆಂಟ್ ನಿರ್ವಹಣಾ ಮಂಡಳಿಗಳಿಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

error: Content is protected !!
Scroll to Top