ರೈಲು ಪ್ರಯಾಣಿಕರೇ ಎಚ್ಚರ ಜುಲೈ 1 ರಿಂದ ಬದಲಾಗಲಿವೆ ಪ್ರಮುಖ ನಿಯಮಗಳು



(ನ್ಯೂಸ್ ಕಡಬ) newskadaba.com ಜೂ. 29. ರೈಲು ಪ್ರಯಾಣವನ್ನು ಇನ್ನಷ್ಟು ಸುರಕ್ಷಿತ ಹಾಗೂ ಶಿಸ್ತುಬದ್ಧಗೊಳಿಸುವ ಉದ್ದೇಶದಿಂದ ಜುಲೈ 1ರಿಂದ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದ್ದು, ಈ ಸಂಬಂಧ ಅಧಿಕೃತ ಗೆಜೆಟ್ ಅಧಿಸೂಚನೆ ಈಗಾಗಲೇ ಪ್ರಕಟಿಸಲಾಗಿದ್ದು, ದೇಶಾದ್ಯಂತ ಹೊಸ ನಿಯಮಗಳು ಜಾರಿಯಾಗಲಿವೆ.







 

ಹೊಸ ನಿಯಮಗಳ ಪ್ರಕಾರ, ರೈಲುಗಳಲ್ಲಿ ಅಥವಾ ರೈಲ್ವೆ ನಿಲ್ದಾಣದ ಆವರಣದಲ್ಲಿ ಧೂಮಪಾನ ಮಾಡುವುದು ಗಂಭೀರ ಉಲ್ಲಂಘನೆಯಾಗಿ ಪರಿಗಣಿಸಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಭಾರಿ ದಂಡ ವಿಧಿಸುವುದರ ಜೊತೆಗೆ, ಪರಿಸ್ಥಿತಿಯ ಗಂಭೀರತೆಯನ್ನು ಆಧರಿಸಿ ಟಿಕೆಟ್ ರದ್ದುಪಡಿಸುವುದು ಹಾಗೂ ಜೈಲು ಶಿಕ್ಷೆಯಂತಹ ಕ್ರಮಗಳನ್ನೂ ಕೈಗೊಳ್ಳುವ ಅವಕಾಶವಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.






ಇದಲ್ಲದೆ, ಕಾಯ್ದಿರಿಸಿದ (ರಿಸರ್ವೇಶನ್) ಟಿಕೆಟ್ ಇಲ್ಲದೆ ಇತರ ಪ್ರಯಾಣಿಕರ ಬರ್ತ್‌ಗಳನ್ನು ಆಕ್ರಮಿಸುವುದು, ಸಹಪ್ರಯಾಣಿಕರಿಗೆ ತೊಂದರೆ ನೀಡುವುದು ಹಾಗೂ ರೈಲಿನಲ್ಲಿ ಅಶಿಸ್ತು ವರ್ತನೆ ನಡೆಸುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಹೊಸ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದ್ದು, ಇದರಿಂದ ಎಲ್ಲರಿಗೂ ಸುರಕ್ಷಿತ, ಸುಗಮ ಮತ್ತು ಶಾಂತಿಯುತ ಪ್ರಯಾಣದ ವಾತಾವರಣ ನಿರ್ಮಾಣವಾಗಲಿದೆ ಎಂದು ತಿಳಿಸಿದೆ.

error: Content is protected !!
Scroll to Top