ಕ್ರೈಮ್ ನ್ಯೂಸ್

ಮಲ್ಪೆ ಬಳಿ ಘೋರ ದುರಂತ: ಸೆಪ್ಟಿಕ್ ಟ್ಯಾಂಕ್ ಚಪ್ಪಡಿ ಮುರಿದು ಬಿದ್ದು ಮಹಿಳೆ ದುರ್ಮರಣ

(ನ್ಯೂಸ್ ಕಡಬ) newskadaba.com ಜೂ. 08. ಬಟ್ಟೆ ಒಣಗಿಸಲು ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದು ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಮಲ್ಪೆ ಸಮೀಪದ ಬಡನಿಡಿಯೂರು ಗ್ರಾಮದಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ಬಡನಿಡಿಯೂರು ನಿವಾಸಿ ಆಲಿಸ್ ಡಿ‘ಸೋಜಾ (74) ಎಂದು ಗುರುತಿಸಲಾಗಿದೆ. ಅವರು ಭಾನುವಾರದಂದು ಬೆಳಿಗ್ಗೆ ಮನೆಯ ಬಳಿ ಬಟ್ಟೆ ಒಣಗಿಸಲು ಹೋದಾಗ ಸೆಪ್ಟಿಕ್ ಟ್ಯಾಂಕ್ ಮೇಲಿದ್ದ ಕಲ್ಲಿನ ಚಪ್ಪಡಿ ಮುರಿದು ಆಕಸ್ಮಿಕವಾಗಿ ಒಳಗೆ ಬಿದ್ದಿದ್ದಾರೆ. ಕಾಂಕ್ರೀಟ್ ಚೂರುಗಳ ನಡುವೆ ಸಿಲುಕಿದ್ದ ಅವರನ್ನು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಈಶ್ವರ್ ಮಲ್ಪೆ […]

ಮಲ್ಪೆ ಬಳಿ ಘೋರ ದುರಂತ: ಸೆಪ್ಟಿಕ್ ಟ್ಯಾಂಕ್ ಚಪ್ಪಡಿ ಮುರಿದು ಬಿದ್ದು ಮಹಿಳೆ ದುರ್ಮರಣ Read More »

ಕರಾವಳಿ, ಕ್ರೈಮ್ ನ್ಯೂಸ್

ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಭೀಕರ ಖಾಸಗಿ ಜೆಟ್ ಪತನ: ಇಬ್ಬರು ಪೈಲಟ್‌ಗಳ ದುರ್ಮರಣ

(ನ್ಯೂಸ್ ಕಡಬ) newskadaba.com ಜೂ. 08. ಡೊಮಿನಿಕನ್ ರಿಪಬ್ಲಿಕ್‌ನ ಲಾ ರೊಮಾನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಸಂಜೆ ಸಂಭವಿಸಿದ ಭೀಕರ ಖಾಸಗಿ ಜೆಟ್ ಅಪಘಾತದಲ್ಲಿ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಅಮೆರಿಕದ ‘ಐಬೊನಿಟೊ ಏವಿಯೇಷನ್‘ ಸಂಸ್ಥೆಗೆ ಸೇರಿದ ‘Gulfstream G200’ ಜೆಟ್ ಟೆಕ್ಸಾಸ್‌ನ ಆಸ್ಟಿನ್‌ಗೆ ಹೊರಟಿತ್ತು. ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ, ಪೈಲಟ್‌ ಗಳು ವಿಮಾನವನ್ನು ಮರಳಿ ರನ್‌ವೇ 29ರಲ್ಲಿ ತುರ್ತು ಲ್ಯಾಂಡಿಂಗ್ ಮಾಡಲು ಯತ್ನಿಸಿದ್ದಾರೆ. ಈ ವೇಳೆ ನಿಯಂತ್ರಣ

ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಭೀಕರ ಖಾಸಗಿ ಜೆಟ್ ಪತನ: ಇಬ್ಬರು ಪೈಲಟ್‌ಗಳ ದುರ್ಮರಣ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ತುರ್ತು ಸಂದರ್ಭದಲ್ಲಿ ಕೈಕೊಟ್ಟ ‘108’ ಆಂಬ್ಯುಲೆನ್ಸ್- ಕೊಕ್ಕಡದ ಉದ್ಯಮಿ ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ) newskadaba.com ಜೂ. 08. ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ ಸಿಗದ ಕಾರಣ ತೀವ್ರ ಹೃದಯಾಘಾತದಿಂದ ಸ್ಥಳೀಯ ಉದ್ಯಮಿ ಧನಂಜಯ್ (36) ಎಂಬುವವರು ಮೃತಪಟ್ಟ ಘಟನೆ ಕೊಕ್ಕಡದಲ್ಲಿ ನಡೆದಿದೆ. ಶುಕ್ರವಾರ ಮಧ್ಯರಾತ್ರಿ ಅವರಿಗೆ ಎದೆನೋವು ಕಾಣಿಸಿಕೊಂಡಾಗ ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲು ಸೂಚಿಸಿದರಾದರೂ, ಆಸ್ಪತ್ರೆಯಲ್ಲಿದ್ದ ‘108’ ಆಂಬ್ಯುಲೆನ್ಸ್ ಚಾಲಕರು ರಜೆಯಲ್ಲಿದ್ದ ಕಾರಣ ಸೇವೆ ಲಭ್ಯವಿರಲಿಲ್ಲ. ಅನಿವಾರ್ಯವಾಗಿ ಕಾರಿನಲ್ಲಿ ಕರೆದೊಯ್ಯುವಾಗ ದಾರಿಮಧ್ಯೆಯೇ ಧನಂಜಯ್ ಕೊನೆಯುಸಿರೆಳೆದಿದ್ದಾರೆ. ಸುಸಜ್ಜಿತ ಆಸ್ಪತ್ರೆಯಿದ್ದರೂ ತುರ್ತು

ತುರ್ತು ಸಂದರ್ಭದಲ್ಲಿ ಕೈಕೊಟ್ಟ ‘108’ ಆಂಬ್ಯುಲೆನ್ಸ್- ಕೊಕ್ಕಡದ ಉದ್ಯಮಿ ಹೃದಯಾಘಾತದಿಂದ ನಿಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಕರ್ನಾಟಕದಿಂದ ಕೇರಳಕ್ಕೆ ಹೋಗಿ, ಖಾಸಗಿ ಬಸ್ಸಿನಲ್ಲಿ ಪ್ರಯಾಣಿಕರ ಹಣ ಕದ್ದು ಸಿಕ್ಕಿಬಿದ್ದ ಮಹಿಳೆ

(ನ್ಯೂಸ್‌ ಕಡಬ) newskadaba.com ಜೂ. 06. ಖಾಸಗಿ ಬಸ್‌ನಲ್ಲಿ ಹಗಲು ಹೊತ್ತಲ್ಲೇ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ  ಮಹಿಳೆಯೊಬ್ಬಳನ್ನು ಪೆರುಂಬಾವೂರ್ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಮಹಿಳೆಯನ್ನು ಕರ್ನಾಟಕದ ಕೊಪ್ಪ ಮೂಲದ ರಾಧಾ (49) ಎಂದು ಗುರುತಿಸಲಾಗಿದೆ. ಪೆರುಂಬಾವೂರ್ ಪ್ರೈವೇಟ್ ಬಸ್ ಸ್ಟ್ಯಾಂಡ್‌ನಲ್ಲಿ ಬಸ್ ನಿಂತಾಗ ಪ್ರಯಾಣಿಕರು ಇಳಿಯುತ್ತಿದ್ದ ಸಂದರ್ಭ ಕೊಂಬನಾಡ್ ತೆಕ್ಕುಪುರಂ ನಿವಾಸಿಯೊಬ್ಬರ ಬ್ಯಾಗ್‌ನಲ್ಲಿದ್ದ ಹಣ, ಎಟಿಎಂ ಕಾರ್ಡ್ ಮತ್ತು ಪೆನ್‌ಡ್ರೈವ್ ಇದ್ದ ಪರ್ಸ್ ಅನ್ನು ಆರೋಪಿ ರಾಧಾ ಕದ್ದಿದ್ದಳು. ಈ ಕಳ್ಳತನದ ವಿಡಿಯೋ

ಕರ್ನಾಟಕದಿಂದ ಕೇರಳಕ್ಕೆ ಹೋಗಿ, ಖಾಸಗಿ ಬಸ್ಸಿನಲ್ಲಿ ಪ್ರಯಾಣಿಕರ ಹಣ ಕದ್ದು ಸಿಕ್ಕಿಬಿದ್ದ ಮಹಿಳೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಟೋವಿಂಗ್ ವಾಹನ ಮತ್ತು ಬೈಕ್ ನಡುವೆ ಢಿಕ್ಕಿ- ಸವಾರ ಗಂಭೀರ

(ನ್ಯೂಸ್‌ ಕಡಬ) newskadaba.com ಸುಳ್ಯ, ಜೂ. 06. ಟೋವಿಂಗ್ ವಾಹನ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಅರಂತೋಡು ಕೊಯನಾಡು ಸಮೀಪದ ದೇವರಕೊಲ್ಲಿ ಎಂಬಲ್ಲಿ ನಡೆದಿದೆ. ಕೇರಳ ನೋಂದಣಿಯ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಸವಾರ ಅಪಘಾತದ ವೇಳೆ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯರ ಸಹಕಾರದೊಂದಿಗೆ ಆಸ್ಪತ್ರೆಗೆ ಸಾಗಿಸಲಾಗಿದೆ.

ಟೋವಿಂಗ್ ವಾಹನ ಮತ್ತು ಬೈಕ್ ನಡುವೆ ಢಿಕ್ಕಿ- ಸವಾರ ಗಂಭೀರ Read More »

ಕರಾವಳಿ, ಕ್ರೈಮ್ ನ್ಯೂಸ್

ಕಾರು-ಸ್ಕೂಟರ್ ಮುಖಾಮುಖಿ ಢಿಕ್ಕಿ- ಸವಾರರಿಗೆ ಗಾಯ

(ನ್ಯೂಸ್ ಕಡಬ) newskadaba.com ಜೂ. 05. ಕಾರು ಮತ್ತು ಸ್ಕೂಟರ್ ಮುಖಾಮುಖಿ ಢಿಕ್ಕಿ ಹೊಡೆದು ಎರಡೂ ವಾಹನಗಳು ರಸ್ತೆ ಬದಿಯ ಚರಂಡಿಗೆ ಬಿದ್ದ ಪರಿಣಾಮ ಸವಾರರು ಗಾಯಗೊಂಡ ಘಟನೆ ಮದ್ದಡ್ಕ-ವರಕದೆ ಸಮೀಪ ಗುರುವಾರ ನಡೆದಿದೆ.   ಬೆಳ್ತಂಗಡಿಯಿಂದ ಮಡಂತ್ಯಾರು ಕಡೆಗೆ ತೆರಳುತ್ತಿದ್ದ ಸ್ಕೂಟರ್ ಹಾಗೂ ಎದುರಿನಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಕಾರು ನಡುವೆ ನಡೆದ ಢಿಕ್ಕಿಯ ರಭಸಕ್ಕೆ ಕಾರು ಮತ್ತು ಸ್ಕೂಟರ್ ರಸ್ತೆ ಬದಿಯ ಚರಂಡಿಗೆ ಬಿದ್ದಿವೆ ಎಂದು ತಿಳಿದುಬಂದಿದೆ. ಘಟನೆಯಿಂದ ಗಾಯಗೊಂಡ ಸವಾರರನ್ನು ಸ್ಥಳೀಯರು ಆಸ್ಪತ್ರೆಗೆ

ಕಾರು-ಸ್ಕೂಟರ್ ಮುಖಾಮುಖಿ ಢಿಕ್ಕಿ- ಸವಾರರಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್
crime, arrest, suspected

ಚಿಪ್ಪು ಹಂದಿಯ ಚಿಪ್ಪು ಪತ್ತೆ: ಆರೋಪಿ ಬಂಧನ

(ನ್ಯೂಸ್ ಕಡಬ) newsksdaba.com ಜೂ. 05. ಚಿಪ್ಪು ಹಂದಿಯ ಚಿಪ್ಪುಗಳನ್ನು ಮಾರಾಟಕ್ಕೆ ಯತ್ನಿಸುತಿದ್ದ ವ್ಯಕ್ತಿಯೋರ್ವನನ್ನು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂದನಕ್ಕೆ  ಒಳಪಡಿಸಿರುವ ಘಟನೆ ನಗರದ  ಕೆಪಿಟಿ ಜಂಕ್ಷನ್ ಬಳಿ ನಡೆದಿದೆ.   ಬಂಧಿತ ಆರೋಪಿಯನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಈಶ್ವರ ನಾಗು ಮರಾಠಿ ಎಂದು ಗುರುತಿಸಲಾಗಿದೆ.  ಬಂಧಿತ ಆರೋಪಿಯಿಂದ 3 ಕಿ.ಗ್ರಾಂ ತೂಕದ ಚಿಪ್ಪು ಹಂದಿಯ ಚಿಪ್ಪನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಬೆಂಗಳೂರು, ಮತ್ತು ಮಡಿಕೇರಿ

ಚಿಪ್ಪು ಹಂದಿಯ ಚಿಪ್ಪು ಪತ್ತೆ: ಆರೋಪಿ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

51 ಗಾಯಗಳು ಬಯಲು ಮಾಡಿದ ಕ್ರೌರ್ಯ 1.5 ವರ್ಷದ ಮಗುವಿನ ಹತ್ಯೆ ಪ್ರಕರಣ ಬೆಚ್ಚಿಬೀಳಿಸಿದ ಕೇರಳ

(ನ್ಯೂಸ್‌ ಕಡಬ) newskadaba.com,  ಜೂ.03: ಕೇರಳದಲ್ಲಿ ಒಂದೂವರೆ ವರ್ಷದ ಮಗುವನ್ನು ಮಲತಂದೆ ಅಸ್ಕರ್‌ ಹೊಡೆದು ಸಾಯಿಸಿ, ನಂತರ ಮಗುವಿಗೆ ಅನ್ನ ಕೊಡುವಾಗ ಗಂಟಲಿಗೆ ಸಿಕ್ಕಾಕಿಕೊಂಡು ಪ್ರಜ್ಞೆ ತಪ್ಪಿತು ಅಂತ ಅತ್ತು ಪಕ್ಕದ ಆಸ್ಪತ್ರೆಗೆ ಆಂಬ್ಯೂಲೆನ್ಸ್‌ನಲ್ಲಿ ಕರೆ ತರುತ್ತಾನೆ, ವೈದ್ಯರು ಪರಿಶೀಲಿಸಿ ಮಗು ಸಾವನ್ನಪ್ಪಿದೆ ಎಂದು ಹೇಳ್ತಾರೆ, ಈತ ಎಲ್ಲರಿಗೆ ಮಗುವಿಗೆ ಆಹಾರ ಕೊಡುವಾಗ ಗಂಟಲಿಗೆ ಸಿಕ್ಕಾಕಿಕೊಂಡು ಈ ರೀತಿ ಆಯ್ತು ಅಂತ ಕತೆಕಟ್ಟಿ ನಂಬಿಸಲು ಪ್ರಯತ್ನಿಸುತ್ತಾನೆ, ಆದರೆ ಮಗುವಿನ ಮೇಲಿದ್ದ 51 ಗಾಯ ಈ ಕ್ರೌರ್ಯ ಬಿಚ್ಚಿಡುತ್ತೆ,

51 ಗಾಯಗಳು ಬಯಲು ಮಾಡಿದ ಕ್ರೌರ್ಯ 1.5 ವರ್ಷದ ಮಗುವಿನ ಹತ್ಯೆ ಪ್ರಕರಣ ಬೆಚ್ಚಿಬೀಳಿಸಿದ ಕೇರಳ Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸತ್ತ ಮೇಲೂ ಸುರಕ್ಷತೆ ಇಲ್ಲವೇ? – ಮಹಿಳೆಯರ ಶವಕ್ಕೂ ಕಾಮುಕನ ಕಾಟ!

(ನ್ಯೂಸ್‌ ಕಡಬ) newskadaba.com,  ಮೇ.31:  ರಾಜ್ಯದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲೊಂದಾದ ಬ್ರಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಮಾನವೀಯ ಮೌಲ್ಯಗಳನ್ನು ಪ್ರಶ್ನಿಸುವಂತಹ ಗಂಭೀರ ಆರೋಪ ಕೇಳಿಬಂದಿದೆ. ಆಸ್ಪತ್ರೆಯ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬ ಮೃತ ಮಹಿಳೆಯರ ಶವಗಳ ಬೆತ್ತಲೆ ಚಿತ್ರಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದು ಸಂಗ್ರಹಿಸಿಕೊಂಡಿದ್ದಾನೆ ಎಂಬ ಆರೋಪ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಾಹಿತಿಯ ಪ್ರಕಾರ, ಶವಾಗಾರದ ಅಟೆಂಡರ್ ಆಗಿರುವ ಮುನೀರ್ ಅಹ್ಮದ್ ಎಂಬಾತ, ಮರಣೋತ್ತರ ಪರೀಕ್ಷೆ (ಪೋಸ್ಟ್‌ಮಾರ್ಟಂ) ವೇಳೆ ಅನುಮತಿ ಇಲ್ಲದೆ ತನ್ನ ಮೊಬೈಲ್ ಫೋನ್‌ನಲ್ಲಿ ಮೃತ ಮಹಿಳೆಯರ

ಸತ್ತ ಮೇಲೂ ಸುರಕ್ಷತೆ ಇಲ್ಲವೇ? – ಮಹಿಳೆಯರ ಶವಕ್ಕೂ ಕಾಮುಕನ ಕಾಟ! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಬಂಟ್ವಾಳ:ಇರ್ಫಾನ್ ಮೃತದೇಹ ಪತ್ತೆ ಪ್ರಕರಣ ಸಮಗ್ರ ತನಿಖೆಗೆ ಎಸ್ಡಿಪಿಐ ಆಗ್ರಹ

(ನ್ಯೂಸ್‌ ಕಡಬ) newskadaba.com ಮೇ. 23. ಬಂಟ್ವಾಳ ತಾಲೂಕಿನ ಬಿ. ಮೂಡ ಗ್ರಾಮದ ಗೂಡಿನಬಳಿ ಕಂಚಿಕಾರಪೇಟೆ ಸಮೀಪ ನೇತ್ರಾವತಿ ನದಿಯ ಹೊಸ ಸೇತುವೆಯಡಿಯಲ್ಲಿ ಸ್ಥಳೀಯ ಯುವಕ ಇರ್ಫಾನ್ ಅವರ ಮೃತದೇಹ ಪತ್ತೆಯಾಗಿರುವ ಘಟನೆ ಅತ್ಯಂತ ದುಃಖಕರ ಹಾಗೂ ಹಲವು ಅನುಮಾನಗಳಿಗೆ ಕಾರಣವಾಗಿರುವ ಸಂಗತಿಯಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.   ಮೃತ ಇರ್ಫಾನ್ (37) ಅವರು ಗೂಡಿನಬಳಿ

ಬಂಟ್ವಾಳ:ಇರ್ಫಾನ್ ಮೃತದೇಹ ಪತ್ತೆ ಪ್ರಕರಣ ಸಮಗ್ರ ತನಿಖೆಗೆ ಎಸ್ಡಿಪಿಐ ಆಗ್ರಹ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top