(ನ್ಯೂಸ್ ಕಡಬ) newskadaba.com, ಜೂ.03: ಕೇರಳದಲ್ಲಿ ಒಂದೂವರೆ ವರ್ಷದ ಮಗುವನ್ನು ಮಲತಂದೆ ಅಸ್ಕರ್ ಹೊಡೆದು ಸಾಯಿಸಿ, ನಂತರ ಮಗುವಿಗೆ ಅನ್ನ ಕೊಡುವಾಗ ಗಂಟಲಿಗೆ ಸಿಕ್ಕಾಕಿಕೊಂಡು ಪ್ರಜ್ಞೆ ತಪ್ಪಿತು ಅಂತ ಅತ್ತು ಪಕ್ಕದ ಆಸ್ಪತ್ರೆಗೆ ಆಂಬ್ಯೂಲೆನ್ಸ್ನಲ್ಲಿ ಕರೆ ತರುತ್ತಾನೆ, ವೈದ್ಯರು ಪರಿಶೀಲಿಸಿ ಮಗು ಸಾವನ್ನಪ್ಪಿದೆ ಎಂದು ಹೇಳ್ತಾರೆ, ಈತ ಎಲ್ಲರಿಗೆ ಮಗುವಿಗೆ ಆಹಾರ ಕೊಡುವಾಗ ಗಂಟಲಿಗೆ ಸಿಕ್ಕಾಕಿಕೊಂಡು ಈ ರೀತಿ ಆಯ್ತು ಅಂತ ಕತೆಕಟ್ಟಿ ನಂಬಿಸಲು ಪ್ರಯತ್ನಿಸುತ್ತಾನೆ, ಆದರೆ ಮಗುವಿನ ಮೇಲಿದ್ದ 51 ಗಾಯ ಈ ಕ್ರೌರ್ಯ ಬಿಚ್ಚಿಡುತ್ತೆ, ಪೊಲೀಸ್ ಆ ಮಗುವಿನ ತಾಯಿ ಹಾಗೂ ಮಲತಂದೆಯನ್ನು ಅರೆಸ್ಟ್ ಮಾಡ್ತಾರೆ, ಈ ಘಟನೆ ನಡೆಯುವಾಗ ತಾಯಿ ಇರಲಿಲ್ಲ, ತಾಯಿ ಡ್ಯಾನ್ಸರ್, ಡ್ಯಾನ್ಸ್ ಪ್ರೋಗ್ರಾಂ ಕೊಡೋಕೆ ಹೋಗಿರುತ್ತಾಳೆ, ಆದರೆ ಮಗುವಿನ ಮೈಯಲ್ಲಿ ಅಷ್ಟೊಂದು ಗಾಯಗಳಿರುವಾಗ ತನ್ನ ಎರಡನೇ ಗಂಡನ ಖುಷಿ ಮಾತ್ರ ನೋಡಿ ಸುಮ್ಮನೆ ಇದ್ಲು ಅಂದ್ರೆ ಅವಳೆಂಥ ತಾಯಿ.
. ಈ ಘಟನೆಯ ಬಳಿಕ ಆ ಕ್ರೂರಿ ಅಸ್ಕರ್ನ ಮುಖವಾಡ ಮತ್ತಷ್ಟು ಬಯಲಾಗುತ್ತೆ. ಈತನಿಗೆ ಈ ಮೊದಲು ಮದುವೆಯಾಗಿತ್ತು, 18 ವರ್ಷದ ಹುಡುಗಿಯನ್ನು ಪ್ರೀತಿಯ ನಾಟಕವಾಡಿ ಕರಕ್ಕೊಂಡು ಹೋಗಿರುತ್ತಾನೆ, ಆಕೆಯ ಮನೆಯವರ ಬಳಿ ಮೊದಲಿಗೆ ಹೆಣ್ಣು ಕೇಳಿ ಹೋಗಿದ್ದ, ಅವರು ಸರಿ ಅಂದಿದ್ದರು, ಆದರೆ ಈತನ ಬುದ್ಧಿ ಗೊತ್ತಾಗಿ ಕೊಡಲ್ಲ ಅಂದಿದ್ದರು, ಆದ್ರೆ ಈತ ಬಂದು ಆಕೆಯನ್ನು ಕರೆದುಕೊಂಡು ಹೋಗ್ತಾನೆ, ಆ ಹುಡುಗಿ ಈತನ ಪ್ರೀತಿಯ ಮಾತು ನಂಬಿ ಮನೆಯವರನ್ನ ದಿಕ್ಕರಿಸಿ ಆತನ ಜೊತೆ ಹೋಗ್ತಾಳೆ, ಆಕೆ ಮತ್ತು ಆತ ಮುಸ್ಲಿಂ ಧರ್ಮದವರಾದ ಕಾರನ ಮನೆಯವರು ಮದುವೆ ಮಾಡಿಕೊಡ್ತಾರೆ, ಅಲ್ಲಿಂದ ಆ ಹುಡುಗಿಗೆ ನರಕ ಶುರುವಾಗುತ್ತೆ, ಪ್ರತಿದಿನ ಹೊಡೆಯುತ್ತಿದ್ದ, ನಿನ್ನ ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಅಂತಿದ್ದ ಅಷ್ಟು ಮಾತ್ರವಲ್ಲ ನೀನು ಇಲ್ಲಿ ನಡೆಯುವುದು ನಿನ್ನ ಮನೆಯವರಿಗೆ ತಿಳಿಸಿದರೆ ಅವರನ್ನು ಸಾಯಿಸುತ್ತೇನೆ ಅಂತ ಬೆದರಿಸುತ್ತಿದ್ದ, ಅವಳೂ ಹೆದರಿ ಏನೂ ಹೇಳ್ತಾ ಇರಲಿಲ್ಲ,
ಇವನು ಇವಳ ತಲೆಯನ್ನು ಗೋಡೆಗೆಲ್ಲಾ ಜಜ್ಜುತ್ತಿದ್ದ, ಈ ಕಾರಣಕ್ಕೆ ತಲೆಯಲ್ಲಿ ಗಂಟು ರೀತಿಯಾಗಿ ಅದು ಕ್ಯಾನ್ಸರ್ ಗಡ್ಡೆಯಾಗುತ್ತದೆ, ಅವಳನ್ನು ಆಕೆಯ ಮನೆಯವರು ಕರೆತಂದು ಆಪರೇಷನ್ ಮಾಡಿಸುತ್ತಾರೆ, ಅವಳು ಕೋಮಾಕ್ಕೆ ಜಾರುತ್ತಾಳೆ, ಈತ ಅವಳನ್ನು ಬಿಟ್ಟು ಬೇರೆ ಹೆಣ್ಣಿನ ಕಡೆ ನಡೆಯುತ್ತಾನೆ, ಆಕೆ 10 ತಿಂಗಳು ಕೋಮಾದಲ್ಲಿರುತ್ತಾಳೆ, ಈಗಲೂ ಆಸ್ಪತ್ರೆಯ ಬೆಡ್ನಲ್ಲಿಯೇ ಇದ್ದಾಳೆ, ಎದ್ದು ನಡೆಯಲು ಆಕೆಯ ತಾಯಿ ಹಾಗು ತಂದೆಯ ಸಹಾಯಬೇಕು, ಆದರೆ ನೆನಪು ಬಂದಿದೆ, ಆಕೆಯನ್ನು ನೋಡುವಾಗ ಯಾರಿಗಾದರೂ ಸಂಕಟವಾಗುತ್ತೆ, ಮದುವೆಯಾಗುವಾಗ ಎಷ್ಟು ಮುದ್ದಾಗಿದ್ದಳು, ಆದರೆ ಈಗ ಹೇಗೆ ಆಗಿದ್ದಾಳೆ… ಈತ ಈಗ ಮಗುವನ್ನು ಸಾಯಿಸಿ ಜೈಲಿಗೆ ಹೋದ್ರೂ ಸ್ವಲ್ಪ ತಿಂಗಳಿನಲ್ಲಿ ಹೊರ ಬರುತ್ತಾನೆ, ರಾಜಾರೋಷವಾಗಿ ಬೀದಿಯಲ್ಲಿ ತಿರುಗಾಡುತ್ತಾನೆ, ಏಕೆಂದರೆ ಎಲ್ಲಿಯವರೆಗೆ ಇಂಥ ಕ್ರಿಮಿನಲ್ಗಳಿಗೆ ಕಠಿಣ ಶಿಕ್ಷೆಯಾಗುವುದಿಲ್ಲವೋ ಅಲ್ಲಿಯವರೆಗೆ ಶಿಕ್ಷೆ ಬಗ್ಗೆ ಭಯ ಇರಲ್ಲ..










