(ನ್ಯೂಸ್ ಕಡಬ) newskadaba.com ಜೂ. 08. ಬಟ್ಟೆ ಒಣಗಿಸಲು ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಸೆಪ್ಟಿಕ್ ಟ್ಯಾಂಕ್ಗೆ ಬಿದ್ದು ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಮಲ್ಪೆ ಸಮೀಪದ ಬಡನಿಡಿಯೂರು ಗ್ರಾಮದಲ್ಲಿ ಸಂಭವಿಸಿದೆ.
ಮೃತಪಟ್ಟವರನ್ನು ಬಡನಿಡಿಯೂರು ನಿವಾಸಿ ಆಲಿಸ್ ಡಿ‘ಸೋಜಾ (74) ಎಂದು ಗುರುತಿಸಲಾಗಿದೆ. ಅವರು ಭಾನುವಾರದಂದು ಬೆಳಿಗ್ಗೆ ಮನೆಯ ಬಳಿ ಬಟ್ಟೆ ಒಣಗಿಸಲು ಹೋದಾಗ ಸೆಪ್ಟಿಕ್ ಟ್ಯಾಂಕ್ ಮೇಲಿದ್ದ ಕಲ್ಲಿನ ಚಪ್ಪಡಿ ಮುರಿದು ಆಕಸ್ಮಿಕವಾಗಿ ಒಳಗೆ ಬಿದ್ದಿದ್ದಾರೆ.
ಕಾಂಕ್ರೀಟ್ ಚೂರುಗಳ ನಡುವೆ ಸಿಲುಕಿದ್ದ ಅವರನ್ನು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಈಶ್ವರ್ ಮಲ್ಪೆ ಅವರ ಸಹಾಯದಿಂದ ಹೊರಗೆ ತೆಗೆಯಲಾಯಿತಾದರೂ, ಆ ಹೊತ್ತಿಗಾಗಲೇ ಅವರು ಮೃತಪಟ್ಟಿದ್ದರು. ಈ ಕುರಿತು ಮೃತರ ಪುತ್ರ ನೀಡಿದ ದೂರಿನಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.









