ಬಂಟ್ವಾಳ: ಬ್ಯಾಂಕ್ ಮೇಲ್ಛಾವಣಿ ಕೊರೆದು ಕಳವಿಗೆ ಯತ್ನಿಸಿದ್ದ ಆರೋಪಿ ಪೋಲಿಸರ ವಶಕ್ಕೆ



(ನ್ಯೂಸ್‌ ಕಡಬ) newskadaba.com,  ಜು.23 ಬಂಟ್ವಾಳ: ಫರಂಗಿಪೇಟೆಯ ಕೆನರಾ ಬ್ಯಾಂಕ್‌ನಲ್ಲಿ ಮೇಲ್ಛಾವಣಿ ಕೊರೆದು ಹಣ ಹಾಗೂ ಚಿನ್ನಾಭರಣ ಕಳವು ಮಾಡಲು ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.







ಬಂಧಿತ ಆರೋಪಿಯನ್ನು ಮಾರಿಪಳ್ಳ ನಿವಾಸಿ ಮೊಹಮ್ಮದ್ ಶಾಖಿರ್ (33) ಎಂದು ಗುರುತಿಸಲಾಗಿದೆ.ಕಳೆದ ಜುಲೈ 13ರಂದು ಕೆನರಾ ಬ್ಯಾಂಕ್ ಕಟ್ಟಡದ ಮೇಲ್ಛಾವಣಿ ಕೊರೆದು ಕಳವಿಗೆ ಯತ್ನಿಸಲಾಗಿತ್ತು.






ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.ಜುಲೈ 22ರಂದು ಆರೋಪಿಯನ್ನು ಬಂಧಿಸಿರುವ ಪೊಲೀಸರು, ಪ್ರಸ್ತುತ ಆತನನ್ನು ವಿಚಾರಣೆಗೊಳಪಡಿಸಿದ್ದು ಹೆಚ್ಚಿನ ತನಿಖೆ ಕಾಯ್ದುಕೊಂಡಿದ್ದಾರೆ.

error: Content is protected !!
Scroll to Top