ಮಂಜೇಶ್ವರ : ಕಾರು, ಬೈಕ್ ನಡುವೆ ಅಪಘಾತ – ಸವಾರ ಮೃತ್ಯು

(ನ್ಯೂಸ್‌ ಕಡಬ) newskadaba.com, ಅ. 15 . ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದ ಸವಾರ ಮೃತ ಪಟ್ಟ ಘಟನೆ ಸೋಮವಾರ ಸಂಜೆ ಮಂಜೇಶ್ವರದ ವರ್ಕಾಡಿ ಬಳಿ ನಡೆದಿದೆ. ಕೊಡ್ಲಮೊಗರು ನಿವಾಸಿ ಮುಹಮ್ಮದ್ ಟಿ . ಮೃತಪಟ್ಟವರು.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮುಹಮ್ಮದ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಾರು ಮತ್ತು ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Scroll to Top