ಮಂಗಳೂರು ಜೈಲಿಗೆ ಹೈಟೆಕ್ ಕಾವಲು: ಮೊಬೈಲ್, ಗಾಂಜಾ ಎಸೆಯುವುದಕ್ಕೆ ಬ್ರೇಕ್ ಹಾಕಲು 12 ಅಡಿ ಎತ್ತರದ ತಂತಿ ಬೇಲಿ!
(ನ್ಯೂಸ್ ಕಡಬ) newskadaba.com, ಜು.14 : ಮಂಗಳೂರಿನ ಕೊಡ್ಯಾಲಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದ ಹಾಲಿ ಇರುವ 15 ಅಡಿ ಎತ್ತರದ ಆವರಣ ಗೋಡೆಯ ಮೇಲೆ ಹೆಚ್ಚುವರಿಯಾಗಿ 12 ಅಡಿ ಎತ್ತರದ ತಂತಿ ಬೇಲಿ ಅಳವಡಿಸುವ ಕಾಮಗಾರಿ ಆರಂಭವಾಗಿದೆ. ಕಾರಾಗೃಹ ಇಲಾಖೆಯ ₹50 ಲಕ್ಷ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆ (PWD) ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.ಹೊರಗಿನ ರಸ್ತೆಯಿಂದ ಜೈಲಿನೊಳಗೆ ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಕಲ್ಲು ಕಟ್ಟಿ ಮೊಬೈಲ್ ಹಾಗೂ ಗಾಂಜಾ ಎಸೆಯುವ ಪ್ರಕರಣಗಳು ಹೆಚ್ಚುತ್ತಿರುವುದನ್ನು ತಡೆಯಲು ಈ ಬಿಗಿ ಕ್ರಮ ಕೈಗೊಳ್ಳಲಾಗಿದೆ. […]








