ಬ್ರೇಕಿಂಗ್ ನ್ಯೂಸ್

ಅಮೆರಿಕ-ಇರಾನ್ ಒಪ್ಪಂದ ಮುರಿತ ಹಾರ್ಮುಜ್ ಜಲಸಂಧಿಯಲ್ಲಿ ಭೀಕರ ಗುಂಡಿನ ಚಕಮಕಿ

(ನ್ಯೂಸ್‌ ಕಡಬ) newskadaba.com,  ಜು.16 ಅಮೆರಿಕವು ತನ್ನ ನಿಯಮಗಳನ್ನು ಪದೇ ಪದೇ ಉಲ್ಲಂಘಿಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿರುವ ಇರಾನ್, ಯುಎಸ್ ಸೈನಿಕರೊಂದಿಗಿನ ತಿಳಿವಳಿಕೆ ಒಪ್ಪಂದದಿಂದ ತಾನು ಸಂಪೂರ್ಣವಾಗಿ ಹಿಂದೆ ಸರಿಯುತ್ತಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ. ಬುಧವಾರ ಮುಂಜಾನೆ ಅಮೆರಿಕ ಪಡೆಗಳು ಇರಾನಿನ ಬಂದರುಗಳ ಮೇಲೆ ಕಠಿಣ ನೌಕಾ ದಿಗ್ಬಂಧನವನ್ನು ಮರುಸ್ಥಾಪಿಸಿದ ಬೆನ್ನಲ್ಲೇ, ಆಯಕಟ್ಟಿನ ಪ್ರದೇಶವಾದ ಹಾರ್ಮುಜ್ ಜಲಸಂಧಿಯಲ್ಲಿ ಉಭಯ ದೇಶಗಳ ಸೇನೆಗಳ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದೆ.ಎಷ್ಟೇ ಭಾರಿ ಬೆಲೆ ತೆರಬೇಕಾಗಿ ಬಂದರೂ ಹಾರ್ಮುಜ್ ಜಲಸಂಧಿಯ ಮೇಲೆ […]

ಅಮೆರಿಕ-ಇರಾನ್ ಒಪ್ಪಂದ ಮುರಿತ ಹಾರ್ಮುಜ್ ಜಲಸಂಧಿಯಲ್ಲಿ ಭೀಕರ ಗುಂಡಿನ ಚಕಮಕಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಾಜ್ಯದಲ್ಲಿ ಹೆಚ್ಚಿದ ‘ವರ್ಕ್ ಫ್ರಮ್ ಹೋಮ್‌’ ವಂಚನೆ ಜಾಲ: ಮಹಿಳೆಯರು, ವಿದ್ಯಾರ್ಥಿಗಳಿಗೆ ಗಾಳ!

(ನ್ಯೂಸ್‌ ಕಡಬ) newskadaba.com,  ಜು.16  ಬೆಂಗಳೂರು: ಮನೆಯಿಂದಲೇ ಕೆಲಸ ಮಾಡಿ ತಿಂಗಳಿಗೆ ಸಾವಿರಾರು ರೂಪಾಯಿ ಗಳಿಸಬಹುದು ಎಂದು ಆಮಿಷ ಒಡ್ಡಿ ನಿರುದ್ಯೋಗಿಗಳು, ಗೃಹಿಣಿಯರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿರುವ ಸೈಬರ್ ಜಾಲ ರಾಜ್ಯದಲ್ಲಿ ತೀವ್ರವಾಗಿ ಸಕ್ರಿಯವಾಗಿದೆ. ಸಾಮಾಜಿಕ ಜಾಲತಾಣಗಳು, ವಾಟ್ಸಾಪ್ ಗ್ರೂಪ್‌ಗಳು ಹಾಗೂ ನಕಲಿ ವೆಬ್‌ಸೈಟ್‌ಗಳ ಮೂಲಕ ಅಗರಬತ್ತಿ/ಮೇಣದಬತ್ತಿ ಪ್ಯಾಕಿಂಗ್, ಡೇಟಾ ಎಂಟ್ರಿ, ಪುಸ್ತಕ ಬರೆಯುವುದು ಮತ್ತು ಉತ್ಪನ್ನಗಳ ತಯಾರಿಕೆಯಂತಹ ಕೆಲಸಗಳ ಜಾಹೀರಾತು ನೀಡಿ ಆಕರ್ಷಿಸಲಾಗುತ್ತಿದೆ. ಉದ್ಯೋಗ ನೀಡುವ ನೆಪದಲ್ಲಿ ನೋಂದಣಿ ಶುಲ್ಕ, ಭದ್ರತಾ ಠೇವಣಿ ಹಾಗೂ

ರಾಜ್ಯದಲ್ಲಿ ಹೆಚ್ಚಿದ ‘ವರ್ಕ್ ಫ್ರಮ್ ಹೋಮ್‌’ ವಂಚನೆ ಜಾಲ: ಮಹಿಳೆಯರು, ವಿದ್ಯಾರ್ಥಿಗಳಿಗೆ ಗಾಳ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಇಂಧನ ರಫ್ತು ಸುಂಕ ಪರಿಷ್ಕರಣೆ ಡೀಸೆಲ್ ತೆರಿಗೆ ಭಾರಿ ಏರಿಕೆ, ಪೆಟ್ರೋಲ್ ಸುಂಕ ಕಡಿತ

(ನ್ಯೂಸ್‌ ಕಡಬ) newskadaba.com,  ಜು.16 :ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳ ಏರಿಳಿತದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಇಂಧನ ರಫ್ತಿನ ಮೇಲಿನ ವಿಂಡ್‌ಫಾಲ್ ತೆರಿಗೆಯನ್ನು ಜುಲೈ 16 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿದೆ. ಪೆಟ್ರೋಲ್: ರಫ್ತು ಸುಂಕ ಪ್ರತಿ ಲೀಟರ್‌ಗೆ ₹4 ರಿಂದ ₹2.5 ಕ್ಕೆ ಇಳಿಕೆ. ಡೀಸೆಲ್: ರಫ್ತು ಸುಂಕ ಪ್ರತಿ ಲೀಟರ್‌ಗೆ ₹7.5 ರಿಂದ ₹15.5 ಕ್ಕೆ ಭಾರಿ ಏರಿಕೆ (ಸರಿಸುಮಾರು ದುಪ್ಪಟ್ಟು). ವಿಮಾನ ಇಂಧನ (ATF): ರಫ್ತು ಸುಂಕ ಪ್ರತಿ ಲೀಟರ್‌ಗೆ ₹7.5

ಇಂಧನ ರಫ್ತು ಸುಂಕ ಪರಿಷ್ಕರಣೆ ಡೀಸೆಲ್ ತೆರಿಗೆ ಭಾರಿ ಏರಿಕೆ, ಪೆಟ್ರೋಲ್ ಸುಂಕ ಕಡಿತ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ಮುಂದಿನ 6 ತಿಂಗಳಲ್ಲಿ 72,186 ಸರ್ಕಾರಿ ಹುದ್ದೆಗಳ ಬೃಹತ್ ನೇಮಕಾತಿ!

(ನ್ಯೂಸ್‌ ಕಡಬ) newskadaba.com,  ಜು.16 : ರಾಜ್ಯದ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಒಳಮೀಸಲಾತಿ ಜಾರಿ ಹಿನ್ನೆಲೆಯಲ್ಲಿ ನನೆಗುದಿಗೆ ಬಿದ್ದಿದ್ದ ನೇಮಕಾತಿ ಪ್ರಕ್ರಿಯೆಗಳಿಗೆ ಕೊನೆಗೂ ಚಾಲನೆ ಸಿಕ್ಕಿದ್ದು, ಮುಂದಿನ ಆರು ತಿಂಗಳೊಳಗೆ ಒಟ್ಟು 72,186 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ನಿರ್ಧರಿಸಿದೆ. 2 ತಿಂಗಳಲ್ಲಿ ಅಧಿಸೂಚನೆ, 4 ತಿಂಗಳಲ್ಲಿ ಆಯ್ಕೆ ಪ್ರಕ್ರಿಯೆ ಪೂರ್ಣ ಹಾಗೂ 6 ತಿಂಗಳೊಳಗೆ ನೇಮಕಾತಿ ಪತ್ರ ವಿತರಿಸಲಾಗುವುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸುಮಾರು 40,000 ಹುದ್ದೆಗಳ ನೇಮಕಾತಿ ಉಸ್ತುವಾರಿ ಹೊತ್ತಿದೆ.

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ಮುಂದಿನ 6 ತಿಂಗಳಲ್ಲಿ 72,186 ಸರ್ಕಾರಿ ಹುದ್ದೆಗಳ ಬೃಹತ್ ನೇಮಕಾತಿ! Read More »

ಉದ್ಯೋಗ, ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಮ ಮಂದಿರದ ಹುಂಡಿ ಕಳವು ಪ್ರಕರಣ: ರಾಮ ಭಕ್ತರ ನಂಬಿಕೆಗೆ ಆಘಾತ – ವಿನಯ್ ಕುಮಾರ್ ಸೊರಕೆ

(ನ್ಯೂಸ್‌ ಕಡಬ) newskadaba.com,  ಜು.16 ಮಂಗಳೂರು: ರಾಮಮಂದಿರದ ಹುಂಡಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್, ವಿಎಚ್‌ಪಿ ಮತ್ತು ಬಿಜೆಪಿಯವರು ಕೋಟ್ಯಂತರ ರಾಮ ಭಕ್ತರ ನಂಬಿಕೆಗೆ ಆಘಾತವನ್ನುಂಟು ಮಾಡಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಆರೋಪಿಸಿದ್ದಾರೆ. ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ನೇಮಿಸಿದ ಟ್ರಸ್ಟಿಗಳಿಂದಲೇ ಈ ಕಳವು ನಡೆದಿದ್ದರೂ, ಐಟಿ, ಇಡಿ ಮತ್ತು

ರಾಮ ಮಂದಿರದ ಹುಂಡಿ ಕಳವು ಪ್ರಕರಣ: ರಾಮ ಭಕ್ತರ ನಂಬಿಕೆಗೆ ಆಘಾತ – ವಿನಯ್ ಕುಮಾರ್ ಸೊರಕೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ: ‘ತಂಬಾಕು ಮುಕ್ತ ಕಾರಾಗೃಹ’ ಘೋಷಣೆಗೆ ಮನವಿ

(ನ್ಯೂಸ್‌ ಕಡಬ) newskadaba.com, ಜು.16: ಅಂತರರಾಷ್ಟ್ರೀಯ ಮಾದಕ ದ್ರವ್ಯ ನಿಷೇಧ ದಿನದ ಅಂಗವಾಗಿ ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ವಿಶೇಷ ಆರೋಗ್ಯ ಶಿಬಿರ ಆಯೋಜನೆ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಉಡುಪಿ ಜಿಲ್ಲಾಸ್ಪತ್ರೆ. ಒಟ್ಟು 145 ಖೈದಿಗಳಿಗೆ ಟಿಬಿ, ಎಕ್ಸ-ರೇ, ICTC, ಹೆಪಟೈಟಿಸ್-ಬಿ ಮತ್ತು ಸಿ, ರಕ್ತದೊತ್ತಡ, ಮಧುಮೇಹ, ಸಿಫಿಲಿಸ್ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಲಾಯಿತು. ನಡೆಸಲಾದ ಮಾದಕ ದ್ರವ್ಯ ಪತ್ತೆ ಹಚ್ಚುವ ಪರೀಕ್ಷೆಯಲ್ಲಿ ಎಲ್ಲಾ 145 ಖೈದಿಗಳ ವರದಿ ನೆಗೆಟಿವ್ ಬಂದಿದ್ದು, ವೈದ್ಯರ

ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ: ‘ತಂಬಾಕು ಮುಕ್ತ ಕಾರಾಗೃಹ’ ಘೋಷಣೆಗೆ ಮನವಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಂಟ್ವಾಳ: ವಿದ್ಯಾನಿಕೇತನ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗದ್ದೆ ನಾಟಿ ಪ್ರಾಯೋಗಿಕ ತರಬೇತಿ

(ನ್ಯೂಸ್‌ ಕಡಬ) newskadaba.com, ಜು.16: ಇನ್ಸ್ಟಿಟ್ಯೂಷನ್ ಆಫ್ ವಿದ್ಯಾನಿಕೇತನ ಶಾಲೆ, ಅಮ್ಟಾಡಿ ಗ್ರಾಮ, ಬಂಟ್ವಾಳ ತಾಲೂಕು (ಬಂಟ್ವಾಳ ಅಪ್ಪಣ್ಣ ಬಾಳಿಗ ಎಜುಕೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಸಂಸ್ಥೆ).ವಿದ್ಯಾರ್ಥಿಗಳಲ್ಲಿ ಕೃಷಿಯ ಮಹತ್ವ ಹಾಗೂ ಗದ್ದೆ ನಾಟಿ ಕುರಿತು ಅರಿವು ಮೂಡಿಸಲು ಪ್ರಾಯೋಗಿಕ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರಗತಿಪರ ಕೃಷಿಕರಾದ ದಯಾನಂದ ಪೆರಾಜೆ ಅವರು ಭತ್ತದ ಬೇಸಾಯದ ವಿಧಾನ, ಗದ್ದೆ ನಾಟಿ ಹಾಗೂ ರೈತರ ಶ್ರಮದ ಕುರಿತು ಮಕ್ಕಳಿಗೆ ಅಮೂಲ್ಯ ಮಾಹಿತಿ ನೀಡಿದರು.ಶಾಲೆಯ ಮುಖ್ಯ ಶಿಕ್ಷಕಿ, ಶಿಕ್ಷಕ ವೃಂದ, ಸಹಾಯಕಿಯರು ಹಾಗೂ

ಬಂಟ್ವಾಳ: ವಿದ್ಯಾನಿಕೇತನ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗದ್ದೆ ನಾಟಿ ಪ್ರಾಯೋಗಿಕ ತರಬೇತಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾವೇರಿ ವಿವಾದ: ಸದ್ಯಕ್ಕೆ ತಮಿಳುನಾಡಿಗೆ ನೀರು ಹರಿಸದಂತೆ ಪ್ರಾಧಿಕಾರ ಸೂಚನೆ

(ನ್ಯೂಸ್ ಕಡಬ) newskadaba.com ಜು. 15. ನವದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ಸಭೆಯಲ್ಲಿ, ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿ ವಾಡಿಕೆಯಂತೆ ಮಳೆಯಾಗದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಸದ್ಯಕ್ಕೆ ಕೆಆರ್‌ಎಸ್ ಅಣೆಕಟ್ಟಿನಿಂದ ನೀರು ಹರಿಸದೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಪ್ರಾಧಿಕಾರವು ಉಭಯ ರಾಜ್ಯಗಳಿಗೆ ಸೂಚನೆ ನೀಡಿದೆ. ಈ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ಜಲಸಂಪನ್ಮೂಲ ಇಲಾಖೆಯ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು. ರಾಜ್ಯದ ಪರವಾಗಿ ಮಾತನಾಡಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು,

ಕಾವೇರಿ ವಿವಾದ: ಸದ್ಯಕ್ಕೆ ತಮಿಳುನಾಡಿಗೆ ನೀರು ಹರಿಸದಂತೆ ಪ್ರಾಧಿಕಾರ ಸೂಚನೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಒಮಾನ್ ಕರಾವಳಿ ಹಡಗು ದುರಂತ ಬಂಟ್ವಾಳದ ರಚನ್ ಸೇರಿ ಹತ್ತು ಭಾರತೀಯರು ರಕ್ಷಣೆ, ಓರ್ವ ನಾಪತ್ತೆ

(ನ್ಯೂಸ್ ಕಡಬ) newskadaba.com ಜು. 15. ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಒಮಾನ್ ಕರಾವಳಿ ಸಮೀಪ ಸಂಚರಿಸುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ಜುಲೈ 12ರ ಮಧ್ಯರಾತ್ರಿ ಭೀಕರ ಕ್ಷಿಪಣಿ ದಾಳಿ ನಡೆದಿದ್ದು, ಈ ದಾಳಿಯಿಂದ ರಕ್ಷಿಸಲ್ಪಟ್ಟ ಭಾರತೀಯ ಸಿಬ್ಬಂದಿಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ರಚನ್ ಆರ್.ಕೆ. (25) ಕೂಡ ಒಬ್ಬರಾಗಿದ್ದಾರೆ. ಭಾನುವಾರ ಮುಂಜಾನೆ ಸುಮಾರು 2.05 ಗಂಟೆಗೆ ಕ್ಷಿಪಣಿ ಅಪ್ಪಳಿಸಿದ ಪರಿಣಾಮ ಹಡಗಿನ ಎಂಜಿನ್ ಕೊಠಡಿಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿತ್ತು.

ಒಮಾನ್ ಕರಾವಳಿ ಹಡಗು ದುರಂತ ಬಂಟ್ವಾಳದ ರಚನ್ ಸೇರಿ ಹತ್ತು ಭಾರತೀಯರು ರಕ್ಷಣೆ, ಓರ್ವ ನಾಪತ್ತೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮೊಬೈಲ್’ನಿಂದ ಹೊಡೆದು ಪತಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಅಸಲಿ ಸತ್ಯ!

(ನ್ಯೂಸ್ ಕಡಬ) newskadaba.com ಜು. 15. ಒಡಿಶಾದ ಬೋಲಾಂಗಿರ್ ಜಿಲ್ಲೆಯಲ್ಲಿ ನಡೆದ ಪತ್ನಿಯ ಹಲ್ಲೆಯಿಂದ ಪತಿ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿದ್ದ ಪ್ರಕರಣವು ಇದೀಗ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿ ಸತ್ಯಾಸತ್ಯತೆಯನ್ನು ಹೊರಹಾಕಿದೆ. ​ಘಟನೆಯ ಹಿನ್ನೆಲೆ: ದಂಪತಿ ನಡುವೆ ನಡೆದ ಜಗಳದ ವೇಳೆ, ಕೋಪಗೊಂಡ ಪತ್ನಿ ತನ್ನ ಮೊಬೈಲ್ ಫೋನ್‌ನಿಂದ ಪತಿಯ ತಲೆಗೆ ಬಲವಾಗಿ ಹೊಡೆದಿದ್ದಳು. ಇದರಿಂದ ಗಾಯಗೊಂಡಿದ್ದ ಪತಿಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಯ ನಂತರ ಮನೆಗೆ ಕರೆತರಲಾಗಿತ್ತು. ಆದರೆ, ಮನೆಗೆ ಬಂದ ಕೆಲವೇ ಸಮಯದಲ್ಲಿ

ಮೊಬೈಲ್’ನಿಂದ ಹೊಡೆದು ಪತಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಅಸಲಿ ಸತ್ಯ! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top