ಬಂಟ್ವಾಳ: ವಿದ್ಯಾನಿಕೇತನ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗದ್ದೆ ನಾಟಿ ಪ್ರಾಯೋಗಿಕ ತರಬೇತಿ



(ನ್ಯೂಸ್‌ ಕಡಬ) newskadaba.com, ಜು.16: ಇನ್ಸ್ಟಿಟ್ಯೂಷನ್ ಆಫ್ ವಿದ್ಯಾನಿಕೇತನ ಶಾಲೆ, ಅಮ್ಟಾಡಿ ಗ್ರಾಮ, ಬಂಟ್ವಾಳ ತಾಲೂಕು (ಬಂಟ್ವಾಳ ಅಪ್ಪಣ್ಣ ಬಾಳಿಗ ಎಜುಕೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಸಂಸ್ಥೆ).ವಿದ್ಯಾರ್ಥಿಗಳಲ್ಲಿ ಕೃಷಿಯ ಮಹತ್ವ ಹಾಗೂ ಗದ್ದೆ ನಾಟಿ ಕುರಿತು ಅರಿವು ಮೂಡಿಸಲು ಪ್ರಾಯೋಗಿಕ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.







ಪ್ರಗತಿಪರ ಕೃಷಿಕರಾದ ದಯಾನಂದ ಪೆರಾಜೆ ಅವರು ಭತ್ತದ ಬೇಸಾಯದ ವಿಧಾನ, ಗದ್ದೆ ನಾಟಿ ಹಾಗೂ ರೈತರ ಶ್ರಮದ ಕುರಿತು ಮಕ್ಕಳಿಗೆ ಅಮೂಲ್ಯ ಮಾಹಿತಿ ನೀಡಿದರು.ಶಾಲೆಯ ಮುಖ್ಯ ಶಿಕ್ಷಕಿ, ಶಿಕ್ಷಕ ವೃಂದ, ಸಹಾಯಕಿಯರು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.






error: Content is protected !!
Scroll to Top