(ನ್ಯೂಸ್ ಕಡಬ) newskadaba.com ,ಆ.06: ತಾಂತ್ರಿಕ ಕಾರಣಗಳಿಂದ ಜೂನ್‌ನಲ್ಲಿ ರದ್ದಾಗಿದ್ದ ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರವು ಆಗಸ್ಟ್ 11 ರಿಂದ 20 ರವರೆಗೆ ನಡೆಯಲಿದೆ.
ಕಡಿದಾದ ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ಮಾರ್ಗದಲ್ಲಿ (55 ಕಿ.ಮೀ, 57 ಸುರಂಗಗಳು, 108 ತಿರುವುಗಳು) ಸುರಕ್ಷಿತವಾಗಿ ಸಂಚರಿಸಲು ಅತ್ಯಗತ್ಯವಾದ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ (AEB) ವ್ಯವಸ್ಥೆ ಹೊಂದಿರುವ ವಿಶೇಷ ರೇಕ್ ಈಗ ಲಭ್ಯವಾಗಿದೆ.ಈ ತಂತ್ರಜ್ಞಾನದಿಂದಾಗಿ ರೈಲಿಗೆ ಹೊರಗಿನಿಂದ ಹೆಚ್ಚುವರಿ ಎಂಜಿನ್ (ಬ್ಯಾಂಕರ್) ಜೋಡಿಸುವ ಸಮಯ ಉಳುಮೆ ಆಗಲಿದ್ದು, ಗರಿಷ್ಠ 30 ಕಿ.ಮೀ ವೇಗವನ್ನು ರೈಲೇ ಸ್ವಯಂಚಾಲಿತವಾಗಿ ನಿಯಂತ್ರಿಸಲಿದೆ.
RDSO ತಂಡದ ಉಸ್ತುವಾರಿಯಲ್ಲಿ ಟ್ರಯಲ್ ರನ್ ಯಶಸ್ವಿಯಾದ ತಕ್ಷಣವೇ ವಾಣಿಜ್ಯ ಸಂಚಾರಕ್ಕೆ ರೈಲ್ವೆ ಮಂಡಳಿಯಿಂದ ಅಧಿಕೃತ ಅನುಮೋದನೆ ಸಿಗಲಿದೆ.








