
(ನ್ಯೂಸ್ ಕಡಬ) newskadaba.com, ಸೆ.22 . ಆಹಾರ ಪದಾರ್ಥಗಳಂತೆಯೇ ಸೋಪು, ಶಾಂಪೂ, ಟೂತ್ಪೇಸ್ಟ್ ಸೇರಿದಂತೆ ವೈಯಕ್ತಿಕ ಆರೈಕೆ ಹಾಗೂ ಕಾಸ್ಮೆಟಿಕ್ ಉತ್ಪನ್ನಗಳ ಮೇಲೆಯೂ ಹಸಿರು ಅಥವಾ ಕೆಂಪು/ಕಂದು ಬಣ್ಣದ ಚುಕ್ಕೆಗಳನ್ನು ಕಾಣಬಹುದು.ಹಸಿರು ಚುಕ್ಕೆಯು ಉತ್ಪನ್ನದಲ್ಲಿ ಬಳಸಿರುವ ಪದಾರ್ಥಗಳು ಸಂಪೂರ್ಣ ಸಸ್ಯಾಹಾರಿ ಮೂಲದವು ಎಂಬುದನ್ನು ಸೂಚಿಸುತ್ತದೆ.
ಕೆಂಪು / ಕಂದು ಚುಕ್ಕೆಯು ಉತ್ಪನ್ನದಲ್ಲಿ ಪ್ರಾಣಿ ಜನ್ಯ ಅಥವಾ ಮಾಂಸಾಹಾರಿ ಮೂಲದ ಅಂಶಗಳಿವೆ ಎಂಬುದನ್ನು ತಿಳಿಸುತ್ತದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ‘ಲೀಗಲ್ ಮೆಟ್ರಾಲಜಿ ನಿಯಮಗಳು’ ಅಡಿಯಲ್ಲಿ ಗ್ರಾಹಕರಿಗೆ ಸುಲಭವಾಗಿ ತಿಳಿಯಲು ಈ ಗುರುತನ್ನು ಪ್ಯಾಕೆಟ್ನ ಪ್ರಮುಖ ಭಾಗದಲ್ಲಿ ಹಾಕುವುದು ಕಡ್ಡಾಯವಾಗಿದೆ. ಧಾರ್ಮಿಕ ನಂಬಿಕೆ ಹಾಗೂ ವೀಗನ್ ಜೀವನಶೈಲಿ ಅನುಸರಿಸುವವರಿಗೆ ಸೂಕ್ತ ಉತ್ಪನ್ನ ಆಯ್ಕೆ ಮಾಡಲು ಇದು ನೆರವಾಗುತ್ತದೆ.




