(ನ್ಯೂಸ್ ಕಡಬ) newskadaba.com ,ಆ.06 : 28 ದಿನಗಳ ವ್ಯಾಲಿಡಿಟಿ, ದಿನಕ್ಕೆ 1GB ಡೇಟಾ, ಅನ್‌ಲಿಮಿಟೆಡ್ ಕಾಲ್ ಹಾಗೂ 100 SMS ನೀಡುತ್ತಿದ್ದ ಜನಪ್ರಿಯ 299 ರೂ. ಪ್ರಿಪೇಯ್ಡ್ ಪ್ಲಾನ್ ಅನ್ನು ಏರ್‌ಟೆಲ್ ದಿಢೀರ್ ತೆಗೆದುಹಾಕಿದೆ.ಈಗ 28 ದಿನಗಳ ವ್ಯಾಲಿಡಿಟಿಗೆ 349 ರೂ. ಪ್ಲಾನ್ ಲಭ್ಯವಿದ್ದು, ಇದರಲ್ಲಿ ದಿನಕ್ಕೆ 2GB ಡೇಟಾ (ಡಬಲ್ ಡೇಟಾ), ಅನ್‌ಲಿಮಿಟೆಡ್ ಕಾಲಿಂಗ್ ಹಾಗೂ ಆಪಲ್ ಮ್ಯೂಸಿಕ್ ಚಂದಾದಾರಿಕೆ ಸಿಗಲಿದೆ.
299 ರೂ. ಪ್ಲಾನ್ ಜೊತೆಗೆ 56 ದಿನಗಳ 579 ರೂ. ಹಾಗೂ 60 ದಿನಗಳ 619 ರೂ. ಪ್ಲಾನ್‌ಗಳನ್ನೂ ಏರ್‌ಟೆಲ್ ಸ್ಥಗಿತಗೊಳಿಸಿದೆ.ಕಡಿಮೆ ಡೇಟಾ ಬಳಸುವವರಿಗೆ 219 ರೂ. (28 ದಿನ, ಒಟ್ಟು 3GB ಡೇಟಾ) ಹಾಗೂ ವಾರ್ಷಿಕ ಪ್ಲಾನ್ ಬಯಸುವವರಿಗೆ 2,249 ರೂ. (365 ದಿನ, ಒಟ್ಟು 30GB ಡೇಟಾ) ಪ್ಲಾನ್‌ಗಳು ಲಭ್ಯವಿವೆ.








