ಕಟೀಲು ದೇವಸ್ಥಾನದ ಗೋಪುರ ಸ್ವಚ್ಛತೆಗೆ ಡ್ರೋನ್ ತಂತ್ರಜ್ಞಾನ



(ನ್ಯೂಸ್‌ ಕಡಬ) newskadaba.com ,ಆ.06 : ಮಂಗಳೂರಿನ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಂಪ್ರದಾಯಿಕ ವಿಧಾನದ ಬದಲಾಗಿ ಮೊದಲ ಬಾರಿಗೆ ಡ್ರೋನ್ ಬಳಸಿ ಗೋಪುರದಲ್ಲಿದ್ದ ಪಾಚಿ ಹಾಗೂ ಧೂಳನ್ನು ಯಶಸ್ವಿಯಾಗಿ ಸ್ವಚ್ಛಗೊಳಿಸಲಾಗಿದೆ.







ಮಂಗಳೂರಿನ ದುರ್ಗಾ ಫೆಸಿಲಿಟಿ ಸಂಸ್ಥೆಯ ಸಜ್ಜಿದಾನಂದ ಶೆಟ್ಟಿ ಅವರು ₹12 ಲಕ್ಷ ವೆಚ್ಚದಲ್ಲಿ ತಂದಿರುವ ಈ ಡ್ರೋನ್, 10 ಲೀಟರ್ ನೀರು ಹಾಗೂ ಹೈ-ಪ್ರೆಶರ್ ವಾಟರ್ ಜೆಟ್ ಸಿಂಪಡಿಸುವ ವ್ಯವಸ್ಥೆ ಹೊಂದಿದ್ದು, 300 ಮೀಟರ್ ಎತ್ತರದವರೆಗೂ ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿದೆ.ಎತ್ತರದ ಸ್ಕ್ಯಾಫೋಲ್ಡಿಂಗ್‌ ಮತ್ತು ಹಗ್ಗಗಳನ್ನು ಬಳಸಿ ಅಪಾಯಕಾರಿ ರೀತಿಯಲ್ಲಿ ಕೆಲಸ ಮಾಡುವುದನ್ನು ತಪ್ಪಿಸಬಹುದು. ಇದರಿಂದ ಸುರಕ್ಷತೆ ಹೆಚ್ಚುವುದಲ್ಲದೆ, ಸಮಯ ಮತ್ತು ನಿರ್ವಹಣಾ ವೆಚ್ಚವೂ ಗಮನಾರ್ಹವಾಗಿ ಕಡಿಮೆಯಾಗುತ್ತದೆ.






ಹಬ್ಬಗಳ ಮುನ್ನ ಗೋಪುರ ಸ್ವಚ್ಛಗೊಳಿಸಿ ಬಣ್ಣ ಬಳಿಯುವ ಕಾರ್ಯಕ್ಕೆ ಈ ಪ್ರಯೋಗ ಸಹಕಾರಿಯಾಗಿದ್ದು, ಮುಂದೆಯೂ ಪ್ರತಿ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಇದೇ ತಂತ್ರಜ್ಞಾನವನ್ನು ಬಳಸಲು ದೇವಸ್ಥಾನದ ಆಡಳಿತ ಮಂಡಳಿ ಚಿಂತನೆ ನಡೆಸಿದೆ.

error: Content is protected !!
Scroll to Top