‘ಅಮ್ಮ ಮದುವೆ ಫಿಕ್ಸ್ ಮಾಡಿದ್ರು’ ಎಂದು ತಲೆ ಬೋಳಿಸಿಕೊಂಡ ಇನ್‌ಸ್ಟಾಗ್ರಾಂ ಸ್ಟಾರ್: ಸಾಮಾಜಿಕ ಜಾಲತಾಣದಲ್ಲಿ ವೈರಲ್

(ನ್ಯೂಸ್‌ ಕಡಬ) newskadaba.com,   ಜು.14 : ಇನ್‌ಸ್ಟಾಗ್ರಾಂ ಬಳಕೆದಾರರಾದ ಕೀರ್ತನಾ ಮೆನನ್ ಎಂಬ ಯುವತಿ ತನ್ನ ಉದ್ದನೆಯ ಕೂದಲನ್ನು ಸಂಪೂರ್ಣವಾಗಿ ಬೋಳಿಸಿಕೊಳ್ಳುವ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಈ ವಿಡಿಯೋಗೆ ಆಕೆ ನೀಡಿದ “POV: ನನ್ನಮ್ಮ ನನ್ನ ಮದುವೆ ಫಿಕ್ಸ್ ಮಾಡಿದ್ರು” ಎಂಬ ಸಾಲು ನೆಟ್ಟಿಗರ ಗಮನ ಸೆಳೆದಿದ್ದು, ದೊಡ್ಡ ಚರ್ಚೆಗೆ ಕಾರಣವಾಗಿದೆ.

ಅನೇಕರು ಇದನ್ನು ಕುಟುಂಬಸ್ಥರು ನಿಶ್ಚಯಿಸಿದ ಮದುವೆ ಹಾಗೂ ಒತ್ತಡದ ವಿರುದ್ಧದ ದಿಟ್ಟ ಪ್ರತಿಭಟನೆ ಎಂದು ಶ್ಲಾಘಿಸಿದ್ದಾರೆ.ಕೆಲವರು ಕೇವಲ ಪ್ರಚಾರಕ್ಕಾಗಿ ಅಥವಾ ವೈಯಕ್ತಿಕ ಇಷ್ಟದಿಂದ ಮಾಡಿರುವ ನಿರ್ಧಾರ ಇರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

Scroll to Top