ಸೌದಿ ಕಚ್ಚಾ ತೈಲ ದರ ಭಾರಿ ಇಳಿಕೆ: ಭಾರತದಲ್ಲಿ ಇಳಿಯಲಿದೆಯೇ ದಿನಸಿ, ಇಂಧನ ವೆಚ್ಚ?

(ನ್ಯೂಸ್‌ ಕಡಬ) newskadaba.com,   ಜು.14 : ಸೌದಿ ಅರೇಬಿಯಾ ಏಷ್ಯಾದ ಗ್ರಾಹಕರಿಗೆ ತನ್ನ ‘ಅರಬ್ ಲೈಟ್’ ಕಚ್ಚಾ ತೈಲದ ಬೆಲೆಯನ್ನು ಬ್ಯಾರೆಲ್‌ಗೆ ಭಾರಿ 11 ಡಾಲರ್ ಕಡಿತಗೊಳಿಸಿದೆ. ಇದು ಕಳೆದ 26 ವರ್ಷಗಳಲ್ಲೇ ಅತ್ಯಂತ ದೊಡ್ಡ ಮಾಸಿಕ ದರ ಕಡಿತವಾಗಿದೆ.

:ಉಕ್ರೇನ್ ಯುದ್ಧದ ನಂತರ ರಷ್ಯಾ ಅತ್ಯಂತ ಕಡಿಮೆ ಬೆಲೆಗೆ ಭಾರತ ಮತ್ತು ಚೀನಾಕ್ಕೆ ತೈಲ ನೀಡುತ್ತಿದೆ. ಇದರಿಂದ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಸೌದಿ ಈ ತಂತ್ರ ಹೂಡಿದೆ.ಯುಎಇ ಮೇ 2026 ರಿಂದ ಒಪೆಕ್ ಒಕ್ಕೂಟದಿಂದ ಅಧಿಕೃತವಾಗಿ ಹೊರಬಂದಿದ್ದು, ಮುಕ್ತವಾಗಿ ತೈಲ ಪೂರೈಕೆ ಆರಂಭಿಸಿದೆ. ಈ ಪೈಪೋಟಿಗೆ ಸೌದಿ ಸಜ್ಜಾಗಬೇಕಿದೆ.

ಭಾರತ ಮತ್ತು ಚೀನಾದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹಾಗೂ ಎಥೆನಾಲ್ ಮಿಶ್ರಣ ಹೆಚ್ಚುತ್ತಿರುವುದರಿಂದ ಭವಿಷ್ಯದಲ್ಲಿ ಕಚ್ಚಾ ತೈಲದ ಬೇಡಿಕೆ ಕುಸಿಯುವ ಭೀತಿ ಸೌದಿಗಿದೆ.ಭಾರತವು ತನ್ನ 85% ಕ್ಕಿಂತ ಹೆಚ್ಚು ತೈಲ ಅಗತ್ಯವನ್ನು ಆಮದು ಮಾಡಿಕೊಳ್ಳುತ್ತದೆ. ಸೌದಿಯಿಂದ ದಿನಕ್ಕೆ 8-9 ಲಕ್ಷ ಬ್ಯಾರೆಲ್ ಆಮದು ಮಾಡಿಕೊಳ್ಳುವ ಭಾರತಕ್ಕೆ ಮಾಸಿಕ ಇಂಧನ ಬಿಲ್‌ನಲ್ಲಿ ಕೋಟ್ಯಂತರ ರೂಪಾಯಿ ಉಳಿತಾಯವಾಗಲಿದೆ.

ತೈಲ ಬೆಲೆ ಇಳಿಕೆಯಿಂದ ಸರಕು ಸಾಗಣೆ ವೆಚ್ಚ ಕಡಿಮೆಯಾಗಿ, ದಿನಸಿ, ಹಾಲು, ತರಕಾರಿ ಸೇರಿದಂತೆ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ನಿಯಂತ್ರಣಕ್ಕೆ ಬರಲಿದೆ.ವಿದೇಶಿ ವಿನಿಮಯ ಆಸ್ತಿ ಉಳಿಯುವುದರಿಂದ ವಿತ್ತೀಯ ಕೊರತೆ ಕಡಿಮೆಯಾಗಿ, ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕುಸಿಯುವುದು ತಪ್ಪುತ್ತದೆ.ವಿಮಾನಯಾನ ,ಪೇಂಟ್ಸ್ ಹಾಗೂ ಇಂಧನ ಆಧಾರಿತ ಉತ್ಪಾದನಾ ವಲಯಗಳ ವೆಚ್ಚ ಗಣನೀಯವಾಗಿ ತಗ್ಗಲಿದೆ.

Scroll to Top