(ನ್ಯೂಸ್ ಕಡಬ) newskadaba.com, ಜು.14 : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನಲ್ಲಿ ನಡೆದ ಗೂಗಲ್ ಐ/ಓ ಕನೆಕ್ಟ್ ಕಾರ್ಯಕ್ರಮದಲ್ಲಿ ದೇಶದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯ ಸ್ಥಾಪನೆಯನ್ನು ಘೋಷಿಸಿದ್ದಾರೆ.
ಕರ್ನಾಟಕವನ್ನು ‘ಎಐ-ನೇಟಿವ್’ ರಾಜ್ಯವನ್ನಾಗಿ ರೂಪಿಸುವುದು, ಎಐ ಪ್ರತಿಭೆಗಳನ್ನು ಬೆಳೆಸುವುದು, ಸುಧಾರಿತ ಸಂಶೋಧನೆಗೆ ಒತ್ತು ನೀಡುವುದು ಹಾಗೂ ಶಿಕ್ಷಣ, ಉದ್ಯಮ ಮತ್ತು ಸರ್ಕಾರದ ನಡುವೆ ಬಾಂಧವ್ಯ ವೃದ್ಧಿಸುವುದು ಈ ವಿಶ್ವವಿದ್ಯಾಲಯದ ಮುಖ್ಯ ಉದ್ದೇಶವಾಗಿದೆ.
ರೋಗಗಳ ಮುಂಚಿತ ಪತ್ತೆ ಮತ್ತು ಸುಧಾರಿತ ವೈದ್ಯಕೀಯ ಸೇವೆ,ರೈತರಿಗೆ ಎಐ-ಚಾಲಿತ ತಾಂತ್ರಿಕ ಸಲಹೆಗಳು, ವೇಗದ ಮತ್ತು ಜನಸ್ನೇಹಿ ಸಾರ್ವಜನಿಕ ಸೇವೆಗಳ ವಿತರಣೆ,ಎಐ ಪರಿಕರಗಳ ಮೂಲಕ ಸ್ಪರ್ಧಾತ್ಮಕತೆ ಹೆಚ್ಚಳ.
ಸ್ಟೀಮ್ ಇಂಜಿನ್, ವಿದ್ಯುತ್, ಇಂಟರ್ನೆಟ್ ಮತ್ತು ಮೊಬೈಲ್ ತಂತ್ರಜ್ಞಾನಗಳಂತೆ, ಪ್ರಸ್ತುತ ಯುಗದಲ್ಲಿ ಕೃತಕ ಬುದ್ಧಿಮತ್ತೆಯು ಮಾನವ ಸಾಮರ್ಥ್ಯವನ್ನೇ ಕ್ರಾಂತಿಕಾರಕವಾಗಿ ಬದಲಾಯಿಸಲಿದೆ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.









