ಡಿಸೆಂಬರ್ ತಿಂಗಳ ವೇಳೆಗೆ ಮೊದಲ ಗಗನಯಾನ- ಇಸ್ರೋ

(ನ್ಯೂಸ್ ಕಡಬ) newskadaba.com ಶ್ರೀಹರಿಕೋಟಾ, ಆ. 17. ಭಾರತ ದೇಶದ ಮೊದಲ ಗಗನಯಾನ ಯೋಜನೆಯನ್ನು ಈ ವರ್ಷದ ಡಿಸೆಂಬರ್‌ಗೆ ಆರಂಭಿಸಲು ಇಸ್ರೋ ನಿರ್ಧರಿಸಿದೆ ಎಂದು ಇಸ್ರೋ ಮುಖ್ಯಸ್ಥ ಸೋಮನಾಥ್ ಹೇಳಿದ್ದಾರೆ.

ಮಾನವ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಸಂಬಂಧಿಸಿದ ರಾಕೆಟ್‌ನ ಕೆಲವು ಭಾಗ ಗಳು ಸತೀಶ್‌ ಧವನ್‌ ಸ್ಪೇಸ್‌ ಸೆಂಟರ್‌ ತಲುಪಿದ್ದು, ಮಾಡ್ನೂಲ್‌ ಜೋಡಣೆಯು ನಡೆದಿದೆ. ಸಿಬಂದಿ ಪಾರಾಗುವ ಹಾರ್ಡ್‌ವೇರ್‌ ಸಹ ಸಿದ್ಧವಾಗಿದೆ ಎಂದೂ ಅವರು ಹೇಳಿದ್ದಾರೆ.

Scroll to Top