BPL ಕಾರ್ಡ್ ದಾರರಿಗೆ ಮುಖ್ಯ ಮಾಹಿತಿ ➤ ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ಚೀಟಿ ರದ್ದು



(ನ್ಯೂಸ್ ಕಡಬ)newskadaba.com ನವದೆಹಲಿ, ಮೇ.16. ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಕೇಂದ್ರ ಸರ್ಕಾರ ಸೂಚಿಸಿದ್ದು, ಲಿಂಕ್ ಮಾಡದಿದ್ದರೆ ಪಡಿತರ ಚೀಟಿ ರದ್ದು ಮಾಡುವುದಾಗಿ ತಿಳಿಸಿದೆ. ಅದ್ರಂತೆ, ಜೂನ್ 30ರೊಳಗೆ ಪಡಿತರ ಚೀಟಿಯನ್ನ ಆಧಾರ್ ಕಾರ್ಡ್’ಗೆ ಲಿಂಕ್ ಮಾಡದಿದ್ದರೆ ಪಡಿತರ ಚೀಟಿ ತಾನಾಗಿಯೇ ರದ್ದಾಗುತ್ತದೆ.







ಜುಲೈ 1ರಿಂದ ಪಡಿತರಕ್ಕೆ ಸಿಗುವ ಉಚಿತ ಅಕ್ಕಿ ಲಭ್ಯವಾಗುವುದಿಲ್ಲ. ತಪ್ಪು ಜನರು ಪಡಿತರ ಚೀಟಿ ಪಡೆಯುವುದನ್ನ ತಪ್ಪಿಸಲು ಸರ್ಕಾರ ಈ ಕ್ರಮ ಸರ್ಕಾರ ತೆಗೆದುಕೊಂಡಿದೆ. ಇನ್ನು ಅರ್ಹರಿಗೆ ಮಾತ್ರ ಗ್ಯಾಸ್ ಅಥವಾ ಸಬ್ಸಿಡಿ ದೊರೆಯುತ್ತದೆ ಎಂದು ತಿಳಿಸಲಾಗಿದೆ.






error: Content is protected !!
Scroll to Top