ಕೇರಳ ವ್ಲಾಗರ್ ರಿಫಾ ಆತ್ಮಹತ್ಯೆ ಪ್ರಕರಣ ➤ ಪತಿ ಮೆಹನಾಝ್ ಬಂಧನ

(ನ್ಯೂಸ್ ಕಡಬ) newskadaba.com ಕೋಝಿಕ್ಕೋಡ್, ಆ. 04. ದುಬೈನಲ್ಲಿ ಆತ್ಮಹತೆಗೈದಿದ್ದಾಳೆಂದು ಹೇಳಲಾಗಿದ್ದ ವ್ಲಾಗರ್ ರಿಫಾ ಮೆಹ್ನು ಸಾವಿಗೆ ಸಂಬಂಧಿಸಿದಂತೆ ಅವರ ಪತಿ ಮೆಹನಾಝ್ ರನ್ನು ಪೋಕ್ಸೊ ಪ್ರಕರಣದಡಿ ಬಂಧಿಸಲಾಗಿದೆ.

ಇವರಿಬ್ಬರ ವಿವಾಹದ ವೇಳೆ ರಿಫಾ ಮೆಹ್ನು ಅಪ್ರಾಪ್ತೆಯಾಗಿದ್ದಳು ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆ ಪೋಕ್ಸೊ ಕಾಯ್ದೆಯಡಿ ಅವರ ಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಸರಗೋಡಿನಲ್ಲಿರುವ ಮೆಹನಾಝ್ ನನ್ನು ತಾಮರಶ್ಶೇರಿ ಡಿವೈಎಸ್ಪಿ ನೇತೃತ್ವದ ತನಿಖಾ ತಂಡವು ಕರೆದುಕೊಂಡು ಹೋಗಿದ್ದು, ಆತನನ್ನು ಪೋಕ್ಸೋ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ರಿಫಾ ಆತ್ಮಹತ್ಯೆ ಸಂಬಂಧಿಸಿದ ಪ್ರಕರಣದಲ್ಲಿ ಮೆಹನಾಝ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತು ಹೈಕೋರ್ಟ್ ತೀರ್ಪು ನೀಡುವ ಮೊದಲೇ ಮೆಹನಾಝ್ ಬಂಧನವಾಗಿದೆ.

Scroll to Top