ಕಾಮನ್ ವೆಲ್ತ್ ಕ್ರೀಡಾಕೂಟ ➤ ಜುಡೋ ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿ

(ನ್ಯೂಸ್ ಕಡಬ) Newskadaba.com ಬರ್ಮಿಂಗ್ ಹ್ಯಾಮ್, ಆ. 04. ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ 78 ಕೆ.ಜಿ ವೈಯಕ್ತಿಕ ಜುಡೋ ಸ್ಪರ್ಧೆಯಲ್ಲಿ ಭಾರತದ ಜುಡೋ ಪಟು ತುಲಿಕಾ ಮಾನ್ ಬೆಳ್ಳಿ ಪದಕ ಪಡೆಯುವ ಮೂಲಕ ತೃಪ್ತರಾದರು.

ಸ್ಪರ್ಧೆ ಮುಗಿಯಲು ಕೇವಲ 30 ಸೆಕೆಂಡ್ ಇದ್ದಾಗ ಎದುರಾಳಿ ಅದ್ಲಿಂಗ್ಟನ್, ಶಕ್ತಿಶಾಲಿ ಎಸೆತದ ಮೂಲಕ ತುಲಿಕಾ ರವರನ್ನು ಮ್ಯಾಟ್ ಗೆ ಉರುಳಿಸಿದರು. ಈ ಮೂಲಕ ಭಾರತಕ್ಕೆ ಜುಡೋ ಸ್ಪರ್ಧೆಯಲ್ಲಿ ಮೂರನೇ ಪದಕವನ್ನು ತಂದುಕೊಟ್ಟರು.

Scroll to Top