ರಸ್ತೆ ಮಧ್ಯೆಯೇ ಪಂಕ್ಚರ್ ಆದ 108 ಆಂಬ್ಯಲೆನ್ಸ್..! ➤ ಚಿಕಿತ್ಸೆ ಸಿಗದೆ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಮಹಾರಾಷ್ಟ್ರ, ಎ. 03. 108 ಆ್ಯಂಬ್ಯುಲೆನ್ಸ್ ಒಂದು ಪಂಕ್ಚರ್ ಆದ ಪರಿಣಾಮ ರೋಗಿಯೋರ್ವ ಮಾರ್ಗ ಮಧ್ಯದಲ್ಲೇ ಮೃತಪಟ್ಟ ಘಟನೆ ಮಹಾರಾಷ್ಟ್ರದ ಅಂಕೋಲದಲ್ಲಿ ನಡೆದಿದೆ.

ರೋಶನ್ (19) ಎಂಬ ಯುವಕನೋರ್ವನನ್ನು ಹೆಚ್ಚಿನ ಚಿಕಿತ್ಸೆಗಾಗಿ​​ ಅಂಕೋಲದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಆಂಬುಲೆನ್ಸ್‌ನ ಹಿಂದಿನ ಚಕ್ರ ಪಂಕ್ಚರ್ ಆಗಿದೆ. ಅಲ್ಲದೇ ಆಂಬುಲೆನ್ಸ್‌ನಲ್ಲಿ ಮತ್ತೊಂದು ಸ್ಟೆಪ್ನಿ ಕೂಡಾ ಇರಲಿಲ್ಲ. ಹೀಗಾಗಿ ಯುವಕ ರೋಶನ್ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾನೆ.

Also Read  ನಿಫಾ ಸೋಂಕಿಗೆ ತುತ್ತಾಗಿ ಕಳೆದ 8 ತಿಂಗಳಿನಿಂದ ಕೋಮಾವಸ್ಥೆಯಲ್ಲಿ 24ರ ಹರೆಯದ ಕಡಬದ ಯುವಕ

error: Content is protected !!
Scroll to Top