ಚಲಿಸುತ್ತಿದ್ದ ಬಸ್ ನಿಂದ ಹೊರಗಡೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮಾಜಿ ಯೋಧ



(ನ್ಯೂಸ್ ಕಡಬ) newskadaba.com ಚಿಕ್ಕೋಡಿ, ಎ. 03. ಚಲಿಸುತ್ತಿದ್ದ ಸಾರಿಗೆ ಬಸ್ ನಿಂದ ಜಿಗಿದು ಮಾಜಿ ಸೈನಿಕರೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಟುರ ಗ್ರಾಮದಲ್ಲಿ ನಡೆದಿದೆ.







 

ಮೃತಪಟ್ಟವರನ್ನು ಗೋಪಿನಾಥ್ ಜೋತಿರಾಮ ಜಾನವಾಡೆ (27) ಎಂದು ಗುರುತಿಸಲಾಗಿದೆ. ಮಾಜಿ ಸೈನಿಕರಾಗಿದ್ದ ಇವರು ಬೆಳಗಾವಿಯಿಂದ ಸಂಕೇಶ್ವರ ಮಾರ್ಗವಾಗಿ ನಿಪ್ಪಾಣಿ ಕಡೆಗೆ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗೋಟುರ ಗ್ರಾಮ ಸಮೀಪಿಸುತ್ತಿದ್ದಂತೆಯೇ ಬಸ್ಸಿನ ಹಿಂಬದಿಯ ಡೋರ್ ತೆರೆದು ಏಕಾಏಕಿ ಹೊರಗಡೆ ಹಾರಿದ್ದಾರೆ. ಪರಿಣಾಮ ಗೋಪಿನಾಥ್ ಪ್ರಯಾಣಿಸುತ್ತಿದ್ದ ಬಸ್ ನ ಹಿಂದಿದ್ದ ಇನ್ನೊಂದು ಸಾರಿಗೆ ಬಸ್ ನ ಅಡಿಗೆ ಬಿದ್ದಿದ್ದು, ತಲೆಗೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೂರು ವರ್ಷಗಳ ಹಿಂದೆ ಭಾರತೀಯ ಸೇನೆಯಲ್ಲಿ ಸೇವೆಯಲ್ಲಿದ್ದ ಇವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಹಿನ್ನೆಲೆ ಅವರನ್ನು ಸೇನೆಯಿಂದ ವಜಾಗೊಳಿಸಲಾಗಿತ್ತು ಎಂದು ಹೇಳಲಾಗಿದೆ. ಬೆಳಗಾವಿಗೆ ಚಿಕಿತ್ಸೆಗಾಗಿ ಕರೆದುಕೊಂಡು ಬರುತ್ರಿದ್ದ ವೇಳೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ಅವರು ಹಾರಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top