ಒಮಾನ್‌ನಲ್ಲಿ ದೂಷಿತ ವಾಹನ ಅಪಘಾತ: ಮೂಡುಬಿದಿರೆ ಮೂಲದ ಯುವಕ ದುರಂತ ಮೃತ್ಯು

(ನ್ಯೂಸ್‌ ಕಡಬ) newskadaba.com  ಜು.29:ಒಮಾನ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂಡುಬಿದಿರೆ ಸಮೀಪದ ಸಾಣೂರು ಮೂಲಗುತ್ತು ನಿವಾಸಿ ರಾಜವರ್ಮ ಜೈನ್ (33) ಅವರು ಮೃತಪಟ್ಟಿದ್ದಾರೆ.

ಒಮಾನ್‌ನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ರಾಜವರ್ಮ, ಸಹೋದ್ಯೋಗಿ ವಾಹನವನ್ನು ರಿವರ್ಸ್ ವೇಳೆ ಆಕಸ್ಮಿಕವಾಗಿ ಚಕ್ರದಡಿಗೆ ಸಿಲುಕಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಅಸುನೀಗಿದ್ದಾರೆ.

ಮೃತ ರಾಜವರ್ಮ ಜೈನ್ ಅವರು ಪತ್ನಿ, ಪುತ್ರಿ ಹಾಗೂ ಅಪಾರ ಕುಟುಂಬಸ್ಥರನ್ನು ಅಗಲಿದ್ದಾರೆ.

Scroll to Top