ಸಿಯಾಚಿನ್‌ನಲ್ಲಿ ಇತಿಹಾಸ ಬರೆದ ಭಾರತೀಯ ಸೇನೆಯ ಮೊದಲ ಮಹಿಳಾ ಅಧಿಕಾರಿ ಕ್ಯಾಪ್ಟನ್ ಶಿವಾ ಚೌಹಾಣ್!



(ನ್ಯೂಸ್‌ ಕಡಬ) newskadaba.com  ಜು.29: ಭಾರತೀಯ ಸೇನೆಯ ಕ್ಯಾಪ್ಟನ್ ಶಿವಾ ಚೌಹಾಣ್ ಅವರು 2023ರ ಜನವರಿಯಲ್ಲಿ ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ಹಿಮನದಿಯ ‘ಕುಮಾರ್ ಪೋಸ್ಟ್’ (15,632 ಅಡಿ ಎತ್ತರ) ನಲ್ಲಿ ನಿಯೋಜನೆಗೊಂಡ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ರಾಜಸ್ಥಾನದ ಉದಯಪುರ ಮೂಲದ ಶಿವಾ, ತಮ್ಮ 11ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರೂ ಆರ್ಥಿಕ ಹಾಗೂ ವೈಯಕ್ತಿಕ ಕಷ್ಟಗಳನ್ನು ಮೆಟ್ಟಿನಿಂತು ಸಿವಿಲ್ ಎಂಜಿನಿಯರಿಂಗ್ (ಬಿ.ಟೆಕ್) ಪದವಿ ಪೂರ್ಣಗೊಳಿಸಿದರು.







2020ರ ಸರ್ವಿಸಸ್ ಸೆಲೆಕ್ಷನ್ ಬೋರ್ಡ್ (SSB) ಸಂದರ್ಶನದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಗಳಿಸಿ, 2021ರಲ್ಲಿ ‘ಕಾರ್ಪ್ಸ್ ಆಫ್ ಎಂಜಿನಿಯರ್ಸ್’ ವಿಭಾಗಕ್ಕೆ ಸೇರ್ಪಡೆಯಾದರು.2022ರಲ್ಲಿ ಸಿಯಾಚಿನ್‌ನಿಂದ ಕಾರ್ಗಿಲ್‌ವರೆಗೆ 500 ಕಿ.ಮೀ. ಸೈಕ್ಲಿಂಗ್ ಎಕ್ಸ್‌ಪಿಡಿಷನ್ ನೇತೃತ್ವ ವಹಿಸಿದ್ದ ಇವರು, ಸಿಯಾಚಿನ್ ಬ್ಯಾಟಲ್ ಸ್ಕೂಲ್‌ನಲ್ಲಿ ಮೈನಸ್ 50 ಡಿಗ್ರಿ ಸೆಲ್ಸಿಯಸ್ ತಾಪಮಾನ ಹಾಗೂ ಕಠಿಣ ಪರಿಸ್ಥಿತಿಯನ್ನು ಎದುರಿಸುವ ವಿಶೇಷ ತರಬೇತಿ ಪಡೆದಿದ್ದಾರೆ.






ಕುಮಾರ್ ಪೋಸ್ಟ್‌ನಲ್ಲಿ ಸೇನಾ ಮೂಲಸೌಕರ್ಯ, ಹೆಲಿಪ್ಯಾಡ್ ನಿರ್ವಹಣೆ ಹಾಗೂ ಕಾರ್ಯಾಚರಣೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಸೈನಿಕ ಸಾಮರ್ಥ್ಯಕ್ಕೆ ಕೌಶಲ್ಯ ಮತ್ತು ನಾಯಕತ್ವ ಮುಖ್ಯವೇ ಹೊರತು ಲಿಂಗವಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

error: Content is protected !!
Scroll to Top