ಬೆಂಗಳೂರಿನಲ್ಲಿ ಕಾರು ಅಪಘಾತ ➤ ಪುತ್ತೂರಿನ ಮೂವರು ಗಂಭೀರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಎ. 03. ಕಾರೊಂದು ಅಪಘಾತಕ್ಕೀಡಾದ ಪರಿಣಾಮ ಪುತ್ತೂರು ಮೂಲದ ಮೂವರು ಗಂಭೀರ ಗಾಯಗೊಂಡ ಘಟನೆ ನೆಲಮಂಗಲದಲ್ಲಿ ನಡೆದಿದೆ.

ಗಾಯಗೊಂಡವರನ್ನು ಪುತ್ತೂರು ದಾರಂದಕುಕ್ಕುವಿನವರು ಎನ್ನಲಾಗಿದೆ. ಇವರು ಶನಿವಾರದಂದು ನಸುಕಿನ ಜಾವ ಪುತ್ತೂರಿನಿಂದ ಬೆಂಗಳೂರಿಗೆ ಕಾರ್ಯಕ್ರಮಕ್ಕೆಂದು ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

Scroll to Top