ಜಿಎಸ್‌ಟಿ ಸುಧಾರಣೆ: ಕ್ರಿಮಿನಲ್‌ ಕೇಸ್‌ಗೆ ₹5 ಕೋಟಿ ವಂಚನೆ ಮಿತಿ ಅಧಿಕಾರಿಗಳ ಬಂಧನ ಅಧಿಕಾರ ರದ್ದತಿಗೆ ಪ್ರಸ್ತಾವನೆ!

(ನ್ಯೂಸ್‌ ಕಡಬ) newskadaba.com, ಅ.05 .ಜಿಎಸ್‌ಟಿ ಅಧಿಕಾರಿಗಳಿಗೆ ನೀಡಲಾಗಿರುವ ನೇರ ಬಂಧನ ಅಧಿಕಾರವನ್ನು ರದ್ದುಗೊಳಿಸಿ, ಬಂಧನಕ್ಕೆ ನ್ಯಾಯಾಲಯದ ಅನುಮೋದನೆಯನ್ನು ಕಡ್ಡಾಯಗೊಳಿಸಲು ಮಂಡಳಿ ಚಿಂತನೆ ನಡೆಸಿದೆ.ಕ್ರಿಮಿನಲ್ ಮೊಕದ್ದಮೆ ಹೂಡಲು ಇರುವ ತೆರಿಗೆ ವಂಚನೆ ಆರ್ಥಿಕ ಮಿತಿಯನ್ನು ₹1 ಕೋಟಿಯಿಂದ ₹5 ಕೋಟಿಗೆ ಹೆಚ್ಚಿಸುವ ಪ್ರಸ್ತಾವನೆ ಮುಂದಿಡಲಾಗಿದೆ.

ವರ್ಗೀಕರಣ, ಮೌಲ್ಯಮಾಪನ ಹಾಗೂ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ವಿವಾದಗಳನ್ನು ಕ್ರಿಮಿನಲ್ ಪ್ರಕ್ರಿಯೆಯಿಂದ ಹೊರಗಿಟ್ಟು, ದಂಡ ಮತ್ತು ಬಡ್ಡಿ ವಸೂಲಿಗೆ ಆದ್ಯತೆ ನೀಡಲು ಯೋಜನೆ ರೂಪಿಸಲಾಗಿದೆ.ಜಿಎಸ್‌ಟಿ ಕಾಯ್ದೆಯಡಿ ಬರುವ ಹಲವು ಅಪರಾಧ ನಿಯಮಗಳನ್ನು ಸಡಿಲಗೊಳಿಸುವ ಹಾಗೂ ಕನಿಷ್ಠ ಜೈಲು ಶಿಕ್ಷೆ ಕಡ್ಡಾಯಗೊಳಿಸುವ ನಿಯಮವನ್ನು ಕೈಬಿಡುವ ಕುರಿತು ಅಕ್ಟೋಬರ್ 7ರ ಸಭೆಯಲ್ಲಿ ಜಿಎಸ್‌ಟಿ ಮಂಡಳಿ ಚರ್ಚಿಸಲಿದೆ.

Scroll to Top