
(ನ್ಯೂಸ್ ಕಡಬ) newskadaba.com, ಅ.05 . ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರದೋಷ್ ಅವರಿಂದ ಇಂದು 4ನೇ ದಿನದ ಮಾಫಿ ಸಾಕ್ಷಿ ಹೇಳಿಕೆ ದಾಖಲಾಗುತ್ತಿದ್ದು, ಇಂದು ಈ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.
ಮಾಫಿ ಸಾಕ್ಷಿ ಹೇಳಿಕೆ ವೇಳೆ ಮರೆತಿದ್ದ ವಿಚಾರಗಳನ್ನು ಪ್ರದೋಷ್ ಮಾರನೇ ದಿನ ಮತ್ತೆ ಸೇರಿಸಿ ಹೇಳಿಕೆ ನೀಡುತ್ತಿರುವುದಕ್ಕೆ ನಟ ದರ್ಶನ್ ಪರ ವಕೀಲರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಯಾರೋ ಹೇಳಿಕೊಟ್ಟಂತೆ ಪ್ರದೋಷ್ ನಡೆದುಕೊಳ್ಳುತ್ತಿದ್ದು, ಇದನ್ನು ಕೋರ್ಟ್ ರೆಕಾರ್ಡ್ ಮಾಡಬಾರದು ಎಂದು ವಾದಿಸಿದ್ದಾರೆ.
ಸಾಕ್ಷ್ಯ ಕಾಯ್ದೆ ಸೆಕ್ಷನ್ 137 ಮತ್ತು 138ರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ದರ್ಶನ್ ವಕೀಲರು ಸಲ್ಲಿಸಿದ್ದ ಅರ್ಜಿಯ ಕುರಿತು 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಇಂದು ಆದೇಶ ಪ್ರಕಟಿಸಲಿದೆ.ಪ್ರದೋಷ್ ಹೇಳಿಕೆ ಪೂರ್ಣಗೊಂಡ ಬಳಿಕ ಆರೋಪಿಗಳ ಪರ ವಕೀಲರಿಂದ ನಡೆಸಲಾಗುವ ಕ್ರಾಸ್ ಎಗ್ಸಾಮಿನೇಷನ್ಗೆ ನ್ಯಾಯಾಲಯ ಶೀಘ್ರವೇ ದಿನಾಂಕ ನಿಗದಿಪಡಿಸಲಿದೆ.




