ಹಜ್ ಯಾತ್ರೆಗೆ ಅರ್ಜಿ ಸಲ್ಲಿಸಲು ಜುಲೈ 24ರ ವರೆಗೆ ಅವಧಿ ವಿಸ್ತರಣೆ



(ನ್ಯೂಸ್ ಕಡಬ) newskadaba.com ಜು. 21. ಭಾರತೀಯ ಹಜ್ ಕಮಿಟಿಯು ಹಜ್ 2027 ಯಾತ್ರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಜುಲೈ 24, 2026ರ ರಾತ್ರಿ 11:59ರವರೆಗೆ ವಿಸ್ತರಿಸಿದೆ. ಇದರ ನಂತರ ಯಾವುದೇ ಕಾರಣಕ್ಕೂ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.







ವಿವಿಧ ರಾಜ್ಯ ಹಜ್ ಸಮಿತಿಗಳ ವಿನಂತಿ, ಕೋಟಾ ಪೂರ್ಣಗೊಳ್ಳದಿರುವುದು ಹಾಗೂ ಪಾಸ್‌ಪೋರ್ಟ್ ವಿಳಂಬದಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದ ಯಾತ್ರಿಕರ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕರ್ನಾಟಕ ಹಜ್ ಸಮಿತಿ ಸದಸ್ಯ ಶರಫ್ಫುಸ್ಸಾದಾತ್ ಆದೂರು ಅಶ್ರಫ್ ತಂಙಳ್ ತಿಳಿಸಿದ್ದಾರೆ.






ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 24, 2026

ಅರ್ಜಿಗಳ ಪರಿಶೀಲನೆ & ‘ಕವರ್’ ಜನರೇಶನ್: ಜುಲೈ 25, 2026 ರ ಒಳಗಾಗಿ ಪೂರ್ಣಗೊಳ್ಳಲಿದೆ.

ಆನ್‌ಲೈನ್ ಲಾಟರಿ ಆಯ್ಕೆ

ದಿನಾಂಕ & ಸಮಯ: ಜುಲೈ 30, 2026 (ಬೆಳಿಗ್ಗೆ 11:00 ಗಂಟೆಗೆ)

ಸ್ಥಳ: ಮುಂಬೈನ ‘ಹಜ್ ಹೌಸ್’

ನೇರ ಪ್ರಸಾರ: ಅಧಿಕೃತ ಜಾಲತಾಣ hajcommittee.gov.in ನಲ್ಲಿ ವೀಕ್ಷಿಸಬಹುದು.

ಫಲಿತಾಂಶ: ಆಯ್ಕೆಯಾದವರ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ ಹಾಗೂ ಮೊಬೈಲ್ ಸಂಖ್ಯೆಗೆ SMS ಮೂಲಕ ಮಾಹಿತಿ ಕಳುಹಿಸಲಾಗುತ್ತದೆ.

ಮುಂಗಡ ಹಣ ಪಾವತಿಗೆ ಕೊನೆಯ ದಿನಾಂಕ:

ತಾತ್ಕಾಲಿಕವಾಗಿ ಆಯ್ಕೆಯಾದ ಯಾತ್ರಿಕರು ಮುಂಗಡ ಮೊತ್ತ ₹1,52,300 ಅನ್ನು ಆಗಸ್ಟ್ 10, 2026 ರೊಳಗೆ ಕಡ್ಡಾಯವಾಗಿ ಜಮಾ ಮಾಡಬೇಕಾಗಿದೆ.

error: Content is protected !!
Scroll to Top