(ನ್ಯೂಸ್ ಕಡಬ) newskadaba.com ಜು. 21. ಭಾರತೀಯ ಹಜ್ ಕಮಿಟಿಯು ಹಜ್ 2027 ಯಾತ್ರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಜುಲೈ 24, 2026ರ ರಾತ್ರಿ 11:59ರವರೆಗೆ ವಿಸ್ತರಿಸಿದೆ. ಇದರ ನಂತರ ಯಾವುದೇ ಕಾರಣಕ್ಕೂ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ವಿವಿಧ ರಾಜ್ಯ ಹಜ್ ಸಮಿತಿಗಳ ವಿನಂತಿ, ಕೋಟಾ ಪೂರ್ಣಗೊಳ್ಳದಿರುವುದು ಹಾಗೂ ಪಾಸ್‌ಪೋರ್ಟ್ ವಿಳಂಬದಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದ ಯಾತ್ರಿಕರ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕರ್ನಾಟಕ ಹಜ್ ಸಮಿತಿ ಸದಸ್ಯ ಶರಫ್ಫುಸ್ಸಾದಾತ್ ಆದೂರು ಅಶ್ರಫ್ ತಂಙಳ್ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 24, 2026
ಅರ್ಜಿಗಳ ಪರಿಶೀಲನೆ & ‘ಕವರ್’ ಜನರೇಶನ್: ಜುಲೈ 25, 2026 ರ ಒಳಗಾಗಿ ಪೂರ್ಣಗೊಳ್ಳಲಿದೆ.
ಆನ್‌ಲೈನ್ ಲಾಟರಿ ಆಯ್ಕೆ
ದಿನಾಂಕ & ಸಮಯ: ಜುಲೈ 30, 2026 (ಬೆಳಿಗ್ಗೆ 11:00 ಗಂಟೆಗೆ)
ಸ್ಥಳ: ಮುಂಬೈನ ‘ಹಜ್ ಹೌಸ್’
ನೇರ ಪ್ರಸಾರ: ಅಧಿಕೃತ ಜಾಲತಾಣ hajcommittee.gov.in ನಲ್ಲಿ ವೀಕ್ಷಿಸಬಹುದು.
ಫಲಿತಾಂಶ: ಆಯ್ಕೆಯಾದವರ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ ಹಾಗೂ ಮೊಬೈಲ್ ಸಂಖ್ಯೆಗೆ SMS ಮೂಲಕ ಮಾಹಿತಿ ಕಳುಹಿಸಲಾಗುತ್ತದೆ.
ಮುಂಗಡ ಹಣ ಪಾವತಿಗೆ ಕೊನೆಯ ದಿನಾಂಕ:
ತಾತ್ಕಾಲಿಕವಾಗಿ ಆಯ್ಕೆಯಾದ ಯಾತ್ರಿಕರು ಮುಂಗಡ ಮೊತ್ತ ₹1,52,300 ಅನ್ನು ಆಗಸ್ಟ್ 10, 2026 ರೊಳಗೆ ಕಡ್ಡಾಯವಾಗಿ ಜಮಾ ಮಾಡಬೇಕಾಗಿದೆ.









