LPG ಸಿಲಿಂಡರ್ ಬಿಕ್ಕಟ್ಟು- ಸೈಬರ್ ವಂಚಕರ ತಂತ್ರಕ್ಕೆ 4 ಲಕ್ಷ ರೂ. ಕಳೆದುಕೊಂಡ ಮಹಿಳೆಯರು



(ನ್ಯೂಸ್ ಕಡಬ) newskadaba.com ಮಾ. 14. ದೇಶಾದ್ಯಂತ LPG ಕೊರತೆ ಎದುರಾದ ಬೆನ್ನಲ್ಲೇ ಅನಿಲ ಮಾಹಿತಿಯ ನವೀಕರಣವನ್ನು ಪಡೆಯುವ ನೆಪದಲ್ಲಿ ಆನ್ಲೈನ್ ವಂಚಕರು ಮಹಿಳೆಯರಿಬ್ಬರಿಗೆ ವಂಚಿಸಿದ ಘಟನೆ ಮಹಾರಾಷ್ಟ್ರದ ಕಲ್ಯಾಣ-ಡೊಂಬಿವಲಿ ಪ್ರದೇಶದಿಂದ ವರದಿಯಾಗಿದೆ.





 

 

ದೂರಿನ ಪ್ರಕಾರ, ಇಬ್ಬರು ಮಹಿಳೆಯರು ಅಪರಿಚಿತ ವ್ಯಕ್ತಿಯ ಕರೆಯನ್ನು ಸ್ವೀಕರಿಸಿದ್ದರು. ತಾನು ಮಹಾನಗರ ಗ್ಯಾಸ್ ಲಿಮಿಟೆಡ್ ನಿಂದ ಮಾತನಾಡುತ್ತಿರುವುದಾಗಿ ಹೇಳಿಕೊಂಡಿದ್ದ ವ್ಯಕ್ತಿ ತಮ್ಮ ಫೋನ್‌ ನಲ್ಲಿ ಫಾರಂ ಭರ್ತಿ ಮಾಡಲು ಎಪಿಕೆ ಫೈಲ್ ಒಂದನ್ನು ಡೌನ್ಲೋಡ್ ಮಾಡಿಕೊಂಡು ಅದನ್ನು ತೆರೆಯುವಂತೆ ಸೂಚಿಸಿದ್ದ. ಅದರಂತೆ ಮಹಿಳೆಯರು ಫಾರಂ ತುಂಬಿದ ಬಳಿಕ ಅವರ ಬ್ಯಾಂಕ್ ಖಾತೆಗಳಿಂದ ಸುಮಾರು ನಾಲ್ಕು ಲಕ್ಷ ರೂ. ಮಾಯವಾಗಿರುವುದಾಗಿ ವರದಿಯಾಗಿದೆ. ಈ ಸಂಬಂಧ ಡೊಂಬಿವಲಿ ಪೊಲೀಸ್ ಠಾಣೆಯಲ್ಲಿ ಎರಡು ಆನ್ಲೈನ್ ಹಣಕಾಸು ವಂಚನೆ ಪ್ರಕರಣಗಳು ದಾಖಲಾಗಿವೆ.






 

ಇತ್ತೀಚಿನ ದಿನಗಳಲ್ಲಿ ಇಸ್ರೇಲ್- ಇರಾನ್ ನಡುವಿನ ಯುದ್ದದ ಪರಿಣಾಮವಾಗಿ ಹಲವಾರು ನಗರಗಳು ಗೃಹಬಳಕೆ ಮತ್ತು ವಾಣಿಜ್ಯ LPG ಸಿಲಿಂಡರ್‌ ಗಳ ಕೊರತೆಯನ್ನು ಎದುರಿಸುತ್ತಿವೆ. ಇದರಿಂದಾಗಿ ಆತಂಕಗೊಂಡಿರುವ ಜನರು ಸಿಲಿಂಡರ್ ಖರೀದಿಗೆ ಮುಗಿಬೀಳುತ್ತಿದ್ದಾರೆ.

error: Content is protected !!
Scroll to Top