ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಮಾ. 16ರಿಂದ ಮಂಗಳೂರು-ಶಾರ್ಜಾ ಮಧ್ಯೆ ವಿಮಾನ ಸಂಚಾರ ಆರಂಭ – News Kadaba

ಮಾ. 16ರಿಂದ ಮಂಗಳೂರು-ಶಾರ್ಜಾ ಮಧ್ಯೆ ವಿಮಾನ ಸಂಚಾರ ಆರಂಭ

Guwahati-Chennai IndiGo flight diverted to Bengalur

(ನ್ಯೂಸ್ ಕಡಬ) newskadaba.com ಮಾ. 14. ಗಲ್ಫ್ ಯುದ್ಧ ಭೀತಿಯಿಂದ ಸ್ಥಗಿತಗೊಂಡಿದ್ದ ವಿಮಾನ ಯಾನದ ಪೈಕಿ ಏರ್ ಇಂಡಿಯಾ ಮಂಗಳೂರು- ಶಾರ್ಜಾ ಮಧ್ಯೆ ಮಾ.16ರಿಂದ 28ರವರೆಗೆ ಪ್ರತಿದಿನ ವಿಮಾನ ಸಂಚಾರ ಆರಂಭಿಸಲಿದೆ.

ಏರ್ ಇಂಡಿಯಾ 6057 ಮಂಗಳೂರಿನಿಂದ ಮಧ್ಯಾಹ್ನ 1:25ಕ್ಕೆ ಹೊರಟು ಶಾರ್ಜಾವನ್ನು ಅಲ್ಲಿನ ಸಮಯ ಸಂಜೆ 4:05ಕ್ಕೆ ತಲುಪಲಿದೆ. ಏರ್ ಇಂಡಿಯಾ 6058 ಶಾರ್ಜಾದಿಂದ ಅಲ್ಲಿನ ಸಮಯ ಸಂಜೆ 5:05 ಕ್ಕೆ ಹೊರಟು ರಾತ್ರಿ 10.30ಕ್ಕೆ ಮಂಗಳೂರು ತಲುಪಲಿದೆ. ಮಂಗಳೂರಿನಿಂದ ದುಬೈಗೆ ವಾರದಲ್ಲಿ 17, ಅಬುಧಾಬಿಗೆ 14, ದೋಹಾಕ್ಕೆ 3, ಜಿದ್ದಾಕ್ಕೆ 3, ಮಸ್ಕತ್‌ಗೆ 2, ಬಹರೈನ್‌ಗೆ 4, ಕುವೈತ್‌ಗೆ 3, ದಮ್ಮಾಮ್‌ಗೆ 6 ವಿಮಾನಗಳು ಸಂಚರಿಸುತ್ತವೆ. ಆದರೆ ಗಲ್ಫ್ ಯುದ್ಧ ಭೀತಿಯಿಂದ ಉಂಟಾಗಿರುವ ಬಿಕ್ಕಟ್ಟಿನಿಂದ ಬಹುತೇಕ ಎಲ್ಲ ವಿಮಾನಗಳ ಸಂಚಾರ ರದ್ದಾಗಿದೆ.

ಮಂಗಳೂರು ಮತ್ತು ಹೊಸದಿಲ್ಲಿ ಮಧ್ಯೆ ಮಾ.16ರಿಂದ 25ರ ವರೆಗೆ ಸೋಮವಾರ, ಬುಧವಾರ, ರವಿವಾರ ವಿಮಾನ ಸಂಚರಿಸಲಿದೆ. ಐಎಕ್ಸ್ 1992 ಮಂಗಳೂರಿನಿಂದ ಬೆಳಗ್ಗೆ 9:30ಕ್ಕೆ ಹೊರಟು ಮಧ್ಯಾಹ್ನ 12:25ಕ್ಕೆ ಹೊಸದಿಲ್ಲಿ ತಲುಪಲಿದೆ. ಐಎಕ್ಸ್ 1991 ಹೊಸದಿಲ್ಲಿಯಿಂದ ಬೆಳಗ್ಗೆ 5:15ಕ್ಕೆ ಹೊರಟು ಮಂಗಳೂರನ್ನು ಬೆಳಗ್ಗೆ 8:30ಕ್ಕೆ ತಲುಪಲಿದೆ. ವಾರದ ಇತರ ದಿನಗಳಲ್ಲಿ ಐಎಕ್ಸ್ 1276 ಮಂಗಳೂರಿನಿಂದ ಬೆಳಗ್ಗೆ 08:30ಕ್ಕೆ ಹೊರಟು ಮಧ್ಯಾಹ್ನ 11:45ಕ್ಕೆ ಹೊಸದಿಲ್ಲಿ ತಲುಪಲಿದೆ. ಐಎಕ್ಸ್ 1275 ಹೊಸದಿಲ್ಲಿಯಿಂದ ಬೆಳಗ್ಗೆ 5ಕ್ಕೆ ಹೊರಟು ಬೆಳಗ್ಗೆ 8ಕ್ಕೆ ಮಂಗಳೂರು ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.

Scroll to Top