ಬೆಂಗಳೂರಿನಿಂದ ಹೊರಡಲಿವೆ ಸಾಲು ಸಾಲು ವಿಶೇಷ ರೈಲುಗಳು

(ನ್ಯೂಸ್‌ ಕಡಬ) newskadaba.com, ಸೆ.26 . ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಹಬ್ಬಗಳ ಪ್ರಯುಕ್ತ ಸಾರ್ವಜನಿಕ ಸಾರಿಗೆಯಲ್ಲಿ ಹೆಚ್ಚಾಗುವ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ರೈಲ್ವೆ ಇಲಾಖೆ ವಿಶೇಷ ರೈಲುಗಳ ಸಂಚಾರವನ್ನು ಘೋಷಿಸಿದೆ.

ಬೆಂಗಳೂರು – ಮುಂಬೈ ವಿಶೇಷ ರೈಲು ಅಕ್ಟೋಬರ್ 10 ರಿಂದ ನವೆಂಬರ್ 21 ರವರೆಗೆ ಪ್ರತಿ ಶನಿವಾರ ರಾತ್ರಿ 12.35ಕ್ಕೆ ಮುಂಬೈ (CSMT) ನಿಂದ ಹೊರಟು, ಅದೇ ದಿನ ರಾತ್ರಿ 11.55ಕ್ಕೆ ಬೆಂಗಳೂರು (SMVT) ತಲುಪಲಿದೆ.ಅಕ್ಟೋಬರ್ 11 ರಿಂದ ನವೆಂಬರ್ 22 ರವರೆಗೆ ಪ್ರತಿ ಭಾನುವಾರ ಬೆಳಗ್ಗೆ 4.30ಕ್ಕೆ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಗ್ಗೆ 4.05ಕ್ಕೆ ಮುಂಬೈ ತಲುಪಲಿದೆ.

ಎರಡೂ ಮಾರ್ಗಗಳಲ್ಲಿ ತಲಾ 7 ಟ್ರಿಪ್‌ಗಳು. ಬೆಳಗಾವಿ, ಹುಬ್ಬಳ್ಳಿ, ದಾವಣಗೆರೆ, ಅರಸೀಕೆರೆ, ತುಮಕೂರು, ಪುಣೆ, ಕಲ್ಯಾಣ್ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.ರೈಲು ಸಂ. 08583 (ವಿಶಾಖಪಟ್ಟಣಂ – ಬೆಂಗಳೂರು): ಅಕ್ಟೋಬರ್ 6 ರಿಂದ ನವೆಂಬರ್ 24 ರವರೆಗೆ ಪ್ರತಿ ಮಂಗಳವಾರ ಸಂಜೆ 7 ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ 12.45ಕ್ಕೆ ಬೆಂಗಳೂರು ತಲುಪಲಿದೆ.

ರೈಲು ಸಂ. 08584 (ಬೆಂಗಳೂರು – ವಿಶಾಖಪಟ್ಟಣಂ): ಅಕ್ಟೋಬರ್ 7 ರಿಂದ ನವೆಂಬರ್ 25 ರವರೆಗೆ ಪ್ರತಿ ಬುಧವಾರ ಮಧ್ಯಾಹ್ನ 3.50ಕ್ಕೆ ಹೊರಟು, ಮರುದಿನ ಮಧ್ಯಾಹ್ನ 1.30ಕ್ಕೆ ವಿಶಾಖಪಟ್ಟಣಂ ತಲುಪಲಿದೆ.

Scroll to Top