ಬಂಟ್ವಾಳ: ಅಕ್ರಮ ಮರಳು ಅಡ್ಡೆಗೆ ಪೋಲಿಸ್ ದಾಳಿ – 4 ಮಂದಿ ವಶಕ್ಕೆ, ₹25.24 ಲಕ್ಷ ಮೌಲ್ಯದ ಸೊತ್ತು ವಶ!

(ನ್ಯೂಸ್‌ ಕಡಬ) newskadaba.com, ಸೆ.26 . ನದಿ ದಂಡೆಯಿಂದ ಅಕ್ರಮವಾಗಿ ಮರಳು ತೆಗೆದು ಲಾರಿಗಳಿಗೆ ಲೋಡ್ ಮಾಡುತ್ತಿದ್ದ ಸ್ಥಳದ ಮೇಲೆ ಬಂಟ್ವಾಳ ಗ್ರಾಮಾಂತರ ಸಬ್ ಇನ್ಸ್‌ಪೆಕ್ಟರ್ ರನ್ನಗೌಡ ಪಾಟೀಲ್ ನೇತೃತ್ವದಲ್ಲಿ ಶುಕ್ರವಾರ ದಿಢೀರ್ ದಾಳಿ ನಡೆಸಲಾಗಿದೆ.

₹25.24 ಲಕ್ಷ ಮೌಲ್ಯದ 3 ಟಿಪ್ಪರ್ ಲಾರಿಗಳು, 1 ಜೆಸಿಬಿ/ಅಗೆಯುವ ಯಂತ್ರ, 2 ಲೋಡ್ ಮರಳು ಹಾಗೂ ಮರಳು ಸಾಗಣೆಗೆ ಬಳಸುತ್ತಿದ್ದ ಇತರ ಸಾಮಗ್ರಿಗಳು.

ದಾಳಿ ವೇಳೆ ಸ್ಥಳದಲ್ಲಿದ್ದ 4 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Scroll to Top