ವಿದ್ಯುತ್ ತಂತಿ ತುಳಿದು 3 ಕಾಡಾನೆಗಳು ಮೃತ್ಯು

(ನ್ಯೂಸ್ ಕಡಬ) newskadaba.com ತಮಿಳುನಾಡು, ಮಾ. 07.  ವಿದ್ಯುತ್ ಬೇಲಿ ದಾಟುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಗೊಂಡು ಮೂರು ಆನೆಗಳು ಮೃತಪಟ್ಟ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಮಾರಂಡಹಳ್ಳಿ ಎಂಬಲ್ಲಿ ನಡೆದಿದೆ.

ಘಟನೆಯ ಬಳಿಕ ಕಾನೂನುಬಾಹಿರ ಬೇಲಿ ಬಳಸಿದಕ್ಕಾಗಿ ಮುರುಗೇಶನ್ ಎಂಬಾತನನ್ನು ಬಂಧಿಸಲಾಗಿದ್ದು, ಕಾಡುಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಲು ಬೇಲಿ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

Scroll to Top