ಬೆಳ್ತಂಗಡಿ: ಬೈಕ್ – ಸ್ಕಾರ್ಪಿಯೋ ಅಪಘಾತ…!     ➤  ಸವಾರ ಮೃತ್ಯು

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಮಾ.07. ರಾಷ್ಟ್ರೀಯ ಹೆದ್ದಾರಿಯ ನಿಡಿಗಲ್ ಎಂಬಲ್ಲಿ ಬೈಕ್ ಹಾಗೂ ಸ್ಕಾರ್ಪಿಯೋ ವಾಹನಗಳ ಮಧ್ಯೆ ಅಪಘಾತ ಉಂಟಾಗಿ ಬೈಕ್ ಸವಾರ ಮೃತಪಟ್ಟ ಘಟನೆ ವರದಿಯಾಗಿದೆ.

ಮೃತ ಸವಾರನನ್ನು ಕಲ್ಮಂಜ ಗ್ರಾಮದ ಏಲ್ಲೆಂಗಿ ಮನೆ ನಿವಾಸಿ ಅಶೋಕ್ ಕುಮಾರ್(55) ಎಂದು ಗುರುತಿಸಲಾಗಿದೆ. ಅಪಘಾತದಿಂದ ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಮೃತಪಟ್ಟಿದ್ದಾರೆ.

 

Scroll to Top