ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ದುರಂತ: ಒನ್-ವೇ ನಿಯಮ ಉಲ್ಲಂಘಿಸಿದ ಬೈಕ್ ಸವಾರ ಬಲಿ

(ನ್ಯೂಸ್‌ ಕಡಬ) newskadaba.com,ಜು.06  : ರಾಷ್ಟ್ರೀಯ ಹೆದ್ದಾರಿ 75ರ ಬೋಳಂಗಡಿ ನರಹರಿ ಪರ್ವತದ ಸಮೀಪ (ಪಾಣೆಮಂಗಳೂರು-ಮೆಲ್ಕಾರ್ ರಸ್ತೆ) ಭಾನುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ, ಪುತ್ತೂರು ನಿವಾಸಿ ಅಶೋಕ್ (34) ದಾರುಣವಾಗಿ ಮೃತಪಟ್ಟಿದ್ದಾರೆ. ಬಿ.ಸಿ. ರೋಡ್ ಕಡೆಗೆ ಚಲಿಸುತ್ತಿದ್ದ ಮಾರುತಿ ಕಾರಿಗೆ, ಎದುರಿನಿಂದ ಒನ್-ವೇ ನಿಯಮ ಉಲ್ಲಂಘಿಸಿ ಬಂದ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಅಶೋಕ್ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. […]

ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ದುರಂತ: ಒನ್-ವೇ ನಿಯಮ ಉಲ್ಲಂಘಿಸಿದ ಬೈಕ್ ಸವಾರ ಬಲಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರದ್ದಾದ ಬಿಪಿಎಲ್ ಕಾರ್ಡ್ ಮರುಪಡೆಯಲು ಮುಕ್ತ ಅವಕಾಶ: 45 ದಿನಗಳ ಕಾಲಮಿತಿ ರದ್ದುಗೊಳಿಸಿದ ಸರ್ಕಾರ

(ನ್ಯೂಸ್‌ ಕಡಬ) newskadaba.com,ಜು.06  : ರಾಜ್ಯದಲ್ಲಿ ವಿವಿಧ ಕಾರಣಗಳಿಂದ ರದ್ದಾಗಿದ್ದ ಸುಮಾರು 4 ಲಕ್ಷಕ್ಕೂ ಅಧಿಕ ಬಿಪಿಎಲ್ ಪಡಿತರ ಚೀಟಿಗಳನ್ನು ಮರುಪಡೆಯಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅರ್ಹ ಫಲಾನುಭವಿಗಳಿಗೆ ಮುಕ್ತ ಅವಕಾಶ ಕಲ್ಪಿಸಿದೆ. ಈ ಹಿಂದೆ ನಿಗದಿಪಡಿಸಲಾಗಿದ್ದ 45 ದಿನಗಳ ಕಾಲಮಿತಿಯನ್ನು ಸರ್ಕಾರ ರದ್ದುಗೊಳಿಸಿದ್ದು, ಅರ್ಹರು ಯಾವುದೇ ಆತಂಕವಿಲ್ಲದೆ ಅರ್ಜಿ ಸಲ್ಲಿಸಬಹುದಾಗಿದೆ.ಎಪಿಎಲ್‌ಗೆ ವರ್ಗಾವಣೆಗೊಂಡಿರುವ ಕಾರ್ಡ್‌ದಾರರು ತಾವು ಅರ್ಹರೆಂದು ಸಾಬೀತುಪಡಿಸಲು ಅಗತ್ಯ ದಾಖಲೆಗಳೊಂದಿಗೆ ತಮ್ಮ ವ್ಯಾಪ್ತಿಯ ತಾಲೂಕು ತಹಸೀಲ್ದಾರ್‌ಗೆ ಮನವಿ ಸಲ್ಲಿಸಬೇಕು. ತಹಸೀಲ್ದಾರ್ ಮಟ್ಟದಲ್ಲಿ ದಾಖಲೆಗಳ

ರದ್ದಾದ ಬಿಪಿಎಲ್ ಕಾರ್ಡ್ ಮರುಪಡೆಯಲು ಮುಕ್ತ ಅವಕಾಶ: 45 ದಿನಗಳ ಕಾಲಮಿತಿ ರದ್ದುಗೊಳಿಸಿದ ಸರ್ಕಾರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೊಬೈಲ್ ಟಾರ್ಚ್ ಬೆಳಕಿನಲ್ಲೇ 90 ಕಿ.ಮೀ ಸಂಚರಿಸಿದ ಕೆಕೆಆರ್‌ಟಿಸಿ ಬಸ್: ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ!

(ನ್ಯೂಸ್‌ ಕಡಬ) newskadaba.com,ಜು.06  ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ)ದ ಬಸ್‌ವೊಂದರ ಹೆಡ್‌ಲೈಟ್‌ಗಳು ಕೆಟ್ಟುಹೋಗಿದ್ದರೂ, ಕಂಡಕ್ಟರ್ ಮೊಬೈಲ್ ಫೋನ್ ಟಾರ್ಚ್ ಹಿಡಿದು ಚಾಲಕನಿಗೆ ದಾರಿ ತೋರಿಸುತ್ತಾ ಬಸ್ ಚಲಾಯಿಸಿದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಕಲಬುರಗಿಯಿಂದ ಚಿಂಚೋಳಿಗೆ (ಸುಮಾರು 90 ಕಿ.ಮೀ) ಹೊರಟಿದ್ದ ದಿನದ ಕೊನೆಯ ರಾತ್ರಿ ಪಾಳೆಯದ ಬಸ್‌ನಲ್ಲಿ ಈ ಘಟನೆ ನಡೆದಿದೆ. ಕತ್ತಲೆಯ ರಸ್ತೆಯಲ್ಲಿ ಹೆಡ್‌ಲೈಟ್‌ ಇಲ್ಲದೆ ಪ್ರಯಾಣಿಕರ ಜೀವವನ್ನು ಕೈಯಲ್ಲಿ

ಮೊಬೈಲ್ ಟಾರ್ಚ್ ಬೆಳಕಿನಲ್ಲೇ 90 ಕಿ.ಮೀ ಸಂಚರಿಸಿದ ಕೆಕೆಆರ್‌ಟಿಸಿ ಬಸ್: ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಪ್ಪಲಿಯನ್ನೇ ಕಚ್ಚಿ ಹಿಡಿದು ಹಗೆ ತೀರಿಸಿಕೊಂಡ ಹಾವು ಈ ಉಗ್ರ ರೂಪದ ವಿಡಿಯೋ ವೈರಲ್!!

(ನ್ಯೂಸ್ ಕಡಬ) newskadaba.com ಜು. 06. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಭಯಾನಕ ವಿಡಿಯೋವೊಂದು ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ. ಹಾವೊಂದು ಪ್ಲಾಸ್ಟಿಕ್ ಚಪ್ಪಲಿಯನ್ನು ಬಾಯಲ್ಲಿ ಗಟ್ಟಿಯಾಗಿ ಕಚ್ಚಿ ಹಿಡಿದು, ಅದರ ಮೇಲೆ ಎಡೆಬಿಡದೆ ದಟ್ಟವಾದ ಹಸಿರು ಬಣ್ಣದ ವಿಷ ಕಾರುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ಸಾಮಾನ್ಯವಾಗಿ ಹಾವುಗಳು ಕಚ್ಚಿದಾಗ ಕ್ಷಣಾರ್ಧದಲ್ಲಿ ವಿಷವನ್ನು ದೇಹದೊಳಗೆ ಸೇರಿಸುತ್ತವೆ. ಆದರೆ ಈ ವೈರಲ್ ವಿಡಿಯೋದಲ್ಲಿ ಕಂಡುಬಂದ ದೃಶ್ಯ ಮಾತ್ರ ಎದೆ ನಡುಗಿಸುವಂತಿದೆ. ಹಾವೊಂದು ಹಗೆ ತೀರಿಸಿಕೊಳ್ಳುವಂತೆ, ಅಲ್ಲಿದ್ದ ಪ್ಲಾಸ್ಟಿಕ್ ಚಪ್ಪಲಿಯೊಂದನ್ನು ತನ್ನ

ಚಪ್ಪಲಿಯನ್ನೇ ಕಚ್ಚಿ ಹಿಡಿದು ಹಗೆ ತೀರಿಸಿಕೊಂಡ ಹಾವು ಈ ಉಗ್ರ ರೂಪದ ವಿಡಿಯೋ ವೈರಲ್!! Read More »

ವೀಡಿಯೋ

ಎಡಮಂಗಲ: ಹೃದಯ ಸಂಬಂಧಿ ಕಾಯಿಲೆಗೆ ಬಲಿಯಾದ 15 ವರ್ಷದ ಶಾಲಾ ಬಾಲಕ

(ನ್ಯೂಸ್‌ ಕಡಬ) newskadaba.com,ಜು.06 ಎಡಮಂಗಲ: ಹೃದಯ ಸಂಬಂಧಿ ಕಾಯಿಲೆಯಿಂದ 9ನೇ ತರಗತಿ ವಿದ್ಯಾರ್ಥಿ ಶಿಶಿಲ್ (15) ಮೃತಪಟ್ಟಿರುವ ದುಃಖದ ಘಟನೆ ನಡೆದಿದೆ. ಶಿಶಿಲ್ ಅವರು ಎಡಮಂಗಲ ಗ್ರಾಮದ ಕರಿಂಬಿಲ ನಿವಾಸಿ ಪೂರ್ಣಚಂದ್ರ ಗೌಡ ಹಾಗೂ ಕವಿತಾ ದಂಪತಿಯ ಪುತ್ರ ಹಾಗೂ ನಿಂತಿಕಲ್ಲು ಶಾಲೆಯ ವಿದ್ಯಾರ್ಥಿಯಾಗಿದ್ದರು. ಕಳೆದ ಕೆಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಅವರಿಗೆ ಕಾಣಿಯೂರು, ಪುತ್ತೂರು, ಮಂಗಳೂರು ಕೆಎಂಸಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲು ನಿರ್ಧರಿಸಿದ್ದ ವೇಳೆ, ಜುಲೈ 5ರ ರಾತ್ರಿ ಆರೋಗ್ಯ ಗಂಭೀರಗೊಂಡಿದ್ದು,

ಎಡಮಂಗಲ: ಹೃದಯ ಸಂಬಂಧಿ ಕಾಯಿಲೆಗೆ ಬಲಿಯಾದ 15 ವರ್ಷದ ಶಾಲಾ ಬಾಲಕ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ನಿಯಮ ಉಲ್ಲಂಘಿಸಿದ ಇನ್‌ಸ್ಟಾಗ್ರಾಂ ಜಾಹೀರಾತುಗಳು; ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ

(ನ್ಯೂಸ್‌ ಕಡಬ) newskadaba.com,ಜು.06: ಇನ್‌ಸ್ಟಾಗ್ರಾಂನಲ್ಲಿ ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ ಕಾನೂನುಬಾಹಿರ ವಿಷಯಗಳನ್ನು ಪ್ರಚಾರ ಮಾಡುವ ಪಾವತಿಸಿದ ಜಾಹೀರಾತುಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೆಟಾ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ. ಇಂತಹ ವಿವಾದಾತ್ಮಕ ಜಾಹೀರಾತುಗಳನ್ನು ತಕ್ಷಣವೇ ತೆಗೆದುಹಾಕುವಂತೆ ಸೂಚಿಸಿರುವ ಸರ್ಕಾರ, ಈ ಲೋಪ ಹೇಗೆ ಸಂಭವಿಸಿತು ಮತ್ತು ಇದನ್ನು ತಡೆಯಲು ಕೈಗೊಂಡ ಕ್ರಮಗಳ ಕುರಿತು 7 ದಿನಗಳೊಳಗೆ ಸಮಗ್ರ ವರದಿ ನೀಡುವಂತೆ ಮೆಟಾಗೆ ನಿರ್ದೇಶಿಸಿದೆ. ಬಳಕೆದಾರರನ್ನು ಅಕ್ರಮ ವೆಬ್‌ಸೈಟ್‌ಗಳಿಗೆ ಕರೆದೊಯ್ಯುವಲ್ಲಿ

ನಿಯಮ ಉಲ್ಲಂಘಿಸಿದ ಇನ್‌ಸ್ಟಾಗ್ರಾಂ ಜಾಹೀರಾತುಗಳು; ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅಭಿಮನ್ಯು ಆನೆಗೆ ಆಕಸ್ಮಿಕವಾಗಿ ದಂತ ಮುರಿತ: 2026ರ ದಸರಾ ಸವಾರಿಗೆ ಗಜಪಡೆ ನಾಯಕ ಫಿಟ್!

(ನ್ಯೂಸ್‌ ಕಡಬ) newskadaba.com,ಜು.06: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮತ್ತಿಗೋಡು ಆನೆ ಶಿಬಿರದಲ್ಲಿ ನಿಯಮಿತ ಕಾರ್ಯಾಚರಣೆಯ ಅಂಗವಾಗಿ ಮರದ ದಿಮ್ಮಿಗಳನ್ನು ಸ್ಥಳಾಂತರಿಸುವಾಗ, ಆಕಸ್ಮಿಕವಾಗಿ ಮರದ ದಿಮ್ಮಿ ಬಡಿದು ದಸರಾ ಗಜಪಡೆಯ ನಾಯಕ ‘ಅಭಿಮನ್ಯು’ ಆನೆಯ ಎಡಭಾಗದ ದಂತದ ಮುಂದಿನ ತುದಿ ಮುರಿದಿದೆ. ಘಟನೆಯ ಬೆನ್ನಲ್ಲೇ ಹಿರಿಯ ಅಧಿಕಾರಿಗಳು ಹಾಗೂ ಪಶುವೈದ್ಯರ ತಂಡ ಆನೆಯನ್ನು ಪರೀಕ್ಷಿಸಿದ್ದು, ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ದೃಢಪಡಿಸಿದೆ. ಸದ್ಯ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದ್ದು, ಮುರಿದ ದಂತವು ಕಾಲಕ್ರಮೇಣ ನೈಸರ್ಗಿಕವಾಗಿ ಬೆಳೆಯುವ ಸಾಧ್ಯತೆಯಿದೆ ಎಂದು

ಅಭಿಮನ್ಯು ಆನೆಗೆ ಆಕಸ್ಮಿಕವಾಗಿ ದಂತ ಮುರಿತ: 2026ರ ದಸರಾ ಸವಾರಿಗೆ ಗಜಪಡೆ ನಾಯಕ ಫಿಟ್! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಡಬ: ಬ್ಯಾಂಕ್ ಗೆ ವಂಚಿಸಲು ಯತ್ನ ಇಬ್ಬರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜು. 05. ತೂಕ ಹೆಚ್ಚಿಸಿ ಚಿನ್ನಾಭರಣಗಳನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ವಂಚಿಸಲು ಯತ್ನಿಸುತ್ತಿದ್ದ ಇಬ್ಬರು ಸಂಶಯಾಸ್ಪದ ವ್ಯಕ್ತಿಗಳನ್ನು ಕಡಬ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಗಳನ್ನು ಉಪ್ಪಿನಂಗಡಿಯ ಮಹಮ್ಮದ್ ಫಾಯಿಝ್ (20) ಮತ್ತು ಬಂಟ್ವಾಳ ಕಸಬಾದ ಮೊಹಮ್ಮದ್ ಮುರ್ಷೀದ್ (45) ಎಂದು ಗುರುತಿಸಲಾಗಿದೆ. ವರದಿಯ ಪ್ರಕಾರ, ಜುಲೈ 3ರ ಶುಕ್ರವಾರದಂದು ಸಂಜೆ ಕಡಬ ಪೇಟೆಯಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸುಮಾರು 120 ಗ್ರಾಂ ಚಿನ್ನವನ್ನು

ಕಡಬ: ಬ್ಯಾಂಕ್ ಗೆ ವಂಚಿಸಲು ಯತ್ನ ಇಬ್ಬರು ಪೊಲೀಸ್ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮೃತ್ಯುವಿನ ದರ್ಶನ ನಾಗರಹಾವಿನ ಮಧ್ಯೆ ಮಲಗಿದ್ದ ಮಕ್ಕಳು, ಕ್ಷಣಾರ್ಧದಲ್ಲಿ ಬಚಾವ್!

(ನ್ಯೂಸ್ ಕಡಬ) newskadaba.com ಜು. 05. ಮಕ್ಕಳ ಹಾಸಿಗೆಯಲ್ಲೇ ನಾಗರಹಾವೊಂದು ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ಉತ್ತರ ತಾಲೂಕಿನ ಹೆಸರಘಟ್ಟ ಸಮೀಪದ ಗುಡ್ಡದಹಳ್ಳಿಯ ಮನೆಯೊಂದರಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸದೇ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.   ವರದಿಯ ಪ್ರಕಾರ, ರಾತ್ರಿ ವೇಳೆ ಪೋಷಕರು ಮಕ್ಕಳೊಂದಿಗೆ ಮನೆಯಲ್ಲೇ ಮಲಗಿದ್ದ ಸಂದರ್ಭದಲ್ಲಿ ಸುಮಾರು 5 ಅಡಿ ಉದ್ದದ ನಾಗರಹಾವೊಂದು ಮಕ್ಕಳ ಹಾಸಿಗೆಯ ಬಳಿ ಅಡಗಿಕೊಂಡಿತ್ತು. ಹಾವನ್ನು ಗಮನಿಸಿದ ಪೋಷಕರು ಬೆಚ್ಚಿಬಿದ್ದು ತಕ್ಷಣ

ಮೃತ್ಯುವಿನ ದರ್ಶನ ನಾಗರಹಾವಿನ ಮಧ್ಯೆ ಮಲಗಿದ್ದ ಮಕ್ಕಳು, ಕ್ಷಣಾರ್ಧದಲ್ಲಿ ಬಚಾವ್! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು: ಜಿಮ್ ಟ್ರೈನರ್ ಮೃತ್ಯು..!

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 05. ಜಿಮ್ ಟ್ರೈನರ್ ಓರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ಪುತ್ತೂರಿನಲ್ಲಿ ನಡೆದಿದೆ. ಮೃತರನ್ನು ಮೂಲತಃ ಮಡoತ್ಯಾರ್ ನಿವಾಸಿ ಪ್ರಸ್ತುತ ಪುತ್ತೂರಿನ ಕಲ್ಲಿಮಾರ್ ನಲ್ಲಿ ವಾಸವಿರುವ ಸಚಿನ್ ರೈ ಎಂದು ಗುರುತಿಸಲಾಗಿದೆ. ಇವರು ಹಲವು ವರ್ಷಗಳಿಂದ ಜಿಮ್ ಟ್ರೈನರ್ ಆಗಿದ್ದರು. ಇಂದು ಮುಂಜಾನೆ ಕುಸಿದು ಬಿದ್ದ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಪುತ್ತೂರು: ಜಿಮ್ ಟ್ರೈನರ್ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top