ನಿರ್ಮಾಪಕ ಸುಧನ್ ಸುಂದರಂ ಕೈ ಹಿಡಿದ ಶರ್ಮಿಳಾ ಮಾಂಡ್ರೆ ಜೈಪುರದಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದ ‘ಕೃಷ್ಣ’ ಚೆಲುವೆ!



(ನ್ಯೂಸ್ ಕಡಬ) newskadaba.com ಜು. 14. ಬಹು ಭಾಷಾ ತಾರೆ ನಟಿ ಶರ್ಮಿಳಾ ಮಾಂಡ್ರೆ ಅವರು ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜುಲೈ 12ರಂದು ನಡೆದ ವೈಭವದ ಮದುವೆಯಲ್ಲಿ ಮೋಹಕತಾರೆ ನಟಿ ರಮ್ಯಾ, ನಟಿ ಧನ್ಯಾ ರಾಮ್‌ಕುಮಾರ್‌, ಪೂರ್ಣಿಮಾ ರಾಮ್‌ಕುಮಾರ್‌ ಸೇರಿದಂತೆ ತಮಿಳು, ಕನ್ನಡ ಮತ್ತು ಬಾಲಿವುಡ್‌ನ ತಾರೆಯರು ಭಾಗಿಯಾಗಿ, ನವಜೋಡಿಗೆ ಶುಭ ಕೋರಿದ್ದಾರೆ.







 

ಕನ್ನಡ ಚಿತ್ರರಂಗದ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಅವರು ತಮಿಳಿನ ಚಿತ್ರ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ರಾಜಸ್ಥಾನದ ಜೈಪುರದ ಐತಿಹಾಸಿಕ ಮತ್ತು ಪ್ರಸಿದ್ಧ ಸಮೋಡೆ ಪ್ಯಾಲೇಸ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಶರ್ಮಿಳಾ ಅವರ ಮದುವೆಯ ಚಿತ್ರವನ್ನ ನಟಿ ಧನ್ಯಾ ರಾಮ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.






ಇದಕ್ಕೂ ಮುನ್ನ , ಶರ್ಮಿಳಾ ಮಾಂಡ್ರೆ ಹಾಗೂ ಸುಧನ್ ಸುಂದರಂ ಅವರು ಇತ್ತೀಚೆಗೆ ಜೂನ್ 25, 2026 ರಂದು ಬೆಂಗಳೂರಿನ ತಾರಾ ಹೋಟೆಲ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದರು. ಅದರಂತೆ, ಬೆಂಗಳೂರಿನ ಶರ್ಮಿಳಾ ನಿವಾಸದಲ್ಲೂ ಮದುವೆ ಮುನ್ನ ಸಾಂಪ್ರದಾಯಿಕ ಪೂಜೆಗಳು ನಡೆದಿದ್ದು, ಜುಲೈ 11ರಂದು ಹಳದಿ, ಮೆಹಂದಿ ಹಾಗೂ ಸಂಗೀತ ಸಮಾರಂಭಗಳು ಅತ್ಯಂತ ಅದ್ಧೂರಿಯಾಗಿ ನಡೆದವು. ಈ ವೇಳೆ ಸ್ಯಾಂಡಲ್‌ ವುಡ್ ಕ್ವೀನ್ ರಮ್ಯಾ ಸೇರಿದಂತೆ ಹಲವರು ಭಾಗವಹಿಸಿದ್ದರು.

error: Content is protected !!
Scroll to Top