ಕರಾವಳಿ

ಶಿರಾಡಿ: ಆಸಿಡ್ ಸೇವಿಸಿ ವ್ಯಕ್ತಿ ಆತ್ಮಹತ್ಯೆ; ಅಪಘಾತದ ಬಳಿಕ ಖಿನ್ನತೆಯಿಂದ ಬಳಲುತ್ತಿದ್ದ ವೃದ್ಧ

(ನ್ಯೂಸ್‌ ಕಡಬ) newskadaba.com,  ಜು.04 ಉಪ್ಪಿನಂಗಡಿ: ರಸ್ತೆ ಅಪಘಾತದ ಬಳಿಕ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಶಿರಾಡಿ ಗ್ರಾಮದ ಪಿ.ವಿ. ಜೋಸ್ (64) ಎಂಬುವವರು ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಗುರುವಾರ ಮನೆಯಲ್ಲಿದ್ದ ರಬ್ಬರ್ ಕೃಷಿಯ ಆಸಿಡ್ ಸೇವಿಸಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಶಿರಾಡಿ: ಆಸಿಡ್ ಸೇವಿಸಿ ವ್ಯಕ್ತಿ ಆತ್ಮಹತ್ಯೆ; ಅಪಘಾತದ ಬಳಿಕ ಖಿನ್ನತೆಯಿಂದ ಬಳಲುತ್ತಿದ್ದ ವೃದ್ಧ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಶಾಲಾ ಬಸ್ ಹತ್ತಿದಾಗಿನಿಂದ ಮನೆ ತಲುಪುವವರೆಗೆ ಮಕ್ಕಳ ಸುರಕ್ಷತೆ ಶಾಲೆಯದ್ದೇ ಜವಾಬ್ದಾರಿ: ಹೈಕೋರ್ಟ್ ಮಹತ್ವದ ತೀರ್ಪು

(ನ್ಯೂಸ್‌ ಕಡಬ) newskadaba.com, ಜು.03 : ಮಕ್ಕಳು ಶಾಲಾ ಆವರಣದಲ್ಲಿ ಮಾತ್ರವಲ್ಲ, ಶಾಲಾ ಬಸ್ ಹತ್ತಿದಾಗಿನಿಂದ ಕೊನೆಯ ಸ್ಟಾಪ್‌ನಲ್ಲಿ ಇಳಿದು ಮನೆ ತಲುಪುವವರೆಗೆ ಅವರ ಸುರಕ್ಷತೆಯ ಸಂಪೂರ್ಣ ಜವಾಬ್ದಾರಿ ಶಾಲಾ ಆಡಳಿತ ಮಂಡಳಿಯದ್ದೇ ಆಗಿರುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. “ಮಕ್ಕಳಿಗೆ ಬಸ್ ಸೌಕರ್ಯ ನೀಡಿ ನಾವೇನೋ ಉಪಕಾರ ಮಾಡುತ್ತಿದ್ದೇವೆ ಎಂಬ ಧೋರಣೆಯನ್ನು ಒಪ್ಪಲು ಸಾಧ್ಯವಿಲ್ಲ. ಇದು ಶಾಸನದ ಅಡಿ ಕಡ್ಡಾಯಗೊಳಿಸಲಾದ ಗಂಭೀರ ಬಾಧ್ಯತೆಯಾಗಿದೆ” ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.

ಶಾಲಾ ಬಸ್ ಹತ್ತಿದಾಗಿನಿಂದ ಮನೆ ತಲುಪುವವರೆಗೆ ಮಕ್ಕಳ ಸುರಕ್ಷತೆ ಶಾಲೆಯದ್ದೇ ಜವಾಬ್ದಾರಿ: ಹೈಕೋರ್ಟ್ ಮಹತ್ವದ ತೀರ್ಪು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿ: ಸಂತೆಕಟ್ಟೆ ಅಂಡರ್‌ಪಾಸ್ ಕಾಮಗಾರಿ ಮುಗಿದರೂ ಕತ್ತಲಲ್ಲೇ ರಸ್ತೆ; ಸವಾರರ ಆತಂಕ

(ನ್ಯೂಸ್‌ ಕಡಬ) newskadaba.com, ಜು.03 : ಬಹುನಿರೀಕ್ಷಿತ ಉಡುಪಿಯ ಸಂತೆಕಟ್ಟೆ ಅಂಡರ್‌ಪಾಸ್ ಕಾಮಗಾರಿ ಪೂರ್ಣಗೊಂಡಿದ್ದರೂ, ಇಲ್ಲಿನ ಬೀದಿ ದೀಪಗಳು ರಾತ್ರಿಯ ವೇಳೆ ಕಾರ್ಯನಿರ್ವಹಿಸುತ್ತಿಲ್ಲ. ಅಂಡರ್‌ಪಾಸ್ ಹಾಗೂ ಸರ್ವಿಸ್ ರಸ್ತೆಗಳು ಸಂಪೂರ್ಣ ಕತ್ತಲೆಯಲ್ಲಿ ಮುಳುಗಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳ ಸುರಕ್ಷತೆಗೆ ಆತಂಕ ಎದುರಾಗಿದೆ.ಮಳೆಗಾಲದ ಕಾರಣ ರಸ್ತೆ ಬದಿಯ ಹೊಂಡ ಹಾಗೂ ನೀರು ನಿಂತಿರುವ ಜಾಗಗಳು ಕತ್ತಲಲ್ಲಿ ಕಾಣಿಸದೆ ಅಪಘಾತಗಳ ಭಯ ಹೆಚ್ಚಾಗಿದೆ. ಮೂಲಸೌಕರ್ಯ ಸಿದ್ಧವಿದ್ದರೂ ಅತ್ಯಗತ್ಯ ಸೌಲಭ್ಯ ಕಲ್ಪಿಸದ ಅಧಿಕಾರಿಗಳ ನಡೆಗೆ ಸ್ಥಳೀಯರು ಅಸಮಾಧಾನ ಹೊರಹಾಕಿದ್ದು, ಸಾರ್ವಜನಿಕರ

ಉಡುಪಿ: ಸಂತೆಕಟ್ಟೆ ಅಂಡರ್‌ಪಾಸ್ ಕಾಮಗಾರಿ ಮುಗಿದರೂ ಕತ್ತಲಲ್ಲೇ ರಸ್ತೆ; ಸವಾರರ ಆತಂಕ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕರಾವಳಿಯಲ್ಲಿ ಜುಲೈ 4 ರಿಂದ ಭಾರೀ ಮಳೆ ಮುನ್ಸೂಚನೆ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ, ಶಾಲೆ-ಕಾಲೇಜುಗಳಿಗೆ ರಜೆ

(ನ್ಯೂಸ್‌ ಕಡಬ) newskadaba.com, ಜು.03 : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸದ್ಯ ಮಳೆ ಕೊಂಚ ಕಡಿಮೆಯಾಗಿದ್ದರೂ, ಜುಲೈ 4 ರಿಂದ 10 ರವರೆಗೆ ಕರಾವಳಿಯುದ್ದಕ್ಕೂ ವ್ಯಾಪಕ ಹಾಗೂ ತೀವ್ರ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತಗಳು ಕಟ್ಟೆಚ್ಚರ ವಹಿಸಿವೆ.ಆರೆಂಜ್ ಅಲರ್ಟ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಜಿಲ್ಲೆಗಳ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಿಗೆ ಜುಲೈ 3ರ ಶುಕ್ರವಾರದಂದು ರಜೆ ಘೋಷಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ಸುರಿದ

ಕರಾವಳಿಯಲ್ಲಿ ಜುಲೈ 4 ರಿಂದ ಭಾರೀ ಮಳೆ ಮುನ್ಸೂಚನೆ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ, ಶಾಲೆ-ಕಾಲೇಜುಗಳಿಗೆ ರಜೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮತದಾರರ ಪಟ್ಟಿ ಪರಿಷ್ಕರಣೆ: ಬಿಎಲ್‌ಒಗಳು ಕಡ್ಡಾಯವಾಗಿ ಮನೆ-ಮನೆಗೆ ಭೇಟಿ ನೀಡಲು ಮುಖ್ಯ ಚುನಾವಣಾಧಿಕಾರಿ ಆದೇಶ

(ನ್ಯೂಸ್‌ ಕಡಬ) newskadaba.com, ಜು.03 ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳೆ ಬಿಎಲ್‌ಒಗಳು (BLO) ಕಡ್ಡಾಯವಾಗಿ ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಆದೇಶಿಸಿದ್ದಾರೆ. ಕಚೇರಿಗಳಲ್ಲಿ ಅಥವಾ ಒಂದೇ ಸ್ಥಳದಲ್ಲಿ ಫಾರ್ಮ್‌ಗಳನ್ನು ವಿತರಿಸುತ್ತಿರುವುದರ ಕುರಿತು ಬಂದ ದೂರುಗಳ ಹಿನ್ನೆಲೆಯಲ್ಲಿ, ಇಂತಹ ನಿಯಮಬಾಹಿರ ಕ್ರಮಗಳಿಗೆ ಅವಕಾಶ ನೀಡಬಾರದು ಎಂದು ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ನಮೂನೆಗಳನ್ನು ಭರ್ತಿ ಮಾಡಲು ತೊಂದರೆ ಪಡುವ ಮತದಾರರಿಗೆ

ಮತದಾರರ ಪಟ್ಟಿ ಪರಿಷ್ಕರಣೆ: ಬಿಎಲ್‌ಒಗಳು ಕಡ್ಡಾಯವಾಗಿ ಮನೆ-ಮನೆಗೆ ಭೇಟಿ ನೀಡಲು ಮುಖ್ಯ ಚುನಾವಣಾಧಿಕಾರಿ ಆದೇಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಯೂಸರ್‌ನೇಮ್ ಭದ್ರತೆ: ವಾಟ್ಸಾಪ್ ಬೆನ್ನಲ್ಲೇ ಟೆಲಿಗ್ರಾಂ, ಸಿಗ್ನಲ್‌ಗೆ ಕೇಂದ್ರದ ನೋಟಿಸ್!

(ನ್ಯೂಸ್‌ ಕಡಬ) newskadaba.com, ಜು.03 ಮೆಸೇಜಿಂಗ್ ಆ್ಯಪ್‌ಗಳ ‘ಯೂಸರ್‌ನೇಮ್’ ವೈಶಿಷ್ಟ್ಯದ ಭದ್ರತೆಗೆ ಸಂಬಂಧಿಸಿದಂತೆ ವಾಟ್ಸಾಪ್‌ಗೆ ನೋಟಿಸ್ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ಟೆಲಿಗ್ರಾಂ ಮತ್ತು ಸಿಗ್ನಲ್ ಸಂಸ್ಥೆಗಳಿಗೂ ನೋಟಿಸ್ ಜಾರಿ ಮಾಡಿದೆ.ಯೂಸರ್‌ನೇಮ್ ಆಧಾರಿತ ಖಾತೆ ವ್ಯವಸ್ಥೆ, ಅದರ ಭದ್ರತಾ ಕ್ರಮಗಳು ಹಾಗೂ ದುರುಪಯೋಗ ತಡೆಗೆ ಕೈಗೊಂಡಿರುವ ತಾಂತ್ರಿಕ ಕ್ರಮಗಳ ಬಗ್ಗೆ ವಿವರವಾದ ವರದಿ ಸಲ್ಲಿಸಲು ಸರ್ಕಾರ ಆದೇಶಿಸಿದೆ. ಫೋನ್ ಸಂಖ್ಯೆ ಇಲ್ಲದೆ ಕೇವಲ ಯೂಸರ್‌ನೇಮ್ ಮೂಲಕ ಸಂಪರ್ಕಿಸುವ ವ್ಯವಸ್ಥೆಯಿಂದ ನಕಲಿ ಖಾತೆಗಳ ಸೃಷ್ಟಿ, ಫಿಶಿಂಗ್, ಆನ್‌ಲೈನ್ ವಂಚನೆ

ಯೂಸರ್‌ನೇಮ್ ಭದ್ರತೆ: ವಾಟ್ಸಾಪ್ ಬೆನ್ನಲ್ಲೇ ಟೆಲಿಗ್ರಾಂ, ಸಿಗ್ನಲ್‌ಗೆ ಕೇಂದ್ರದ ನೋಟಿಸ್! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಬಯಲಾಯ್ತು ಆರೋಪಿಗಳ ಸಂಚು!

(ನ್ಯೂಸ್‌ ಕಡಬ) newskadaba.com, ಜು.03 : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿದ್ದ ಪ್ರಕರಣದ ವಿಚಾರಣೆ ವೇಳೆ ಹಲವು ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ. ಸಾಕ್ಷಿ ನಾಶಪಡಿಸಲು ಮತ್ತು ಸಾಕ್ಷ್ಯ ನುಡಿಯದಂತೆ ತಡೆಯಲು ಆರೋಪಿಗಳು ಸಂಚು ರೂಪಿಸಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ತುಮಕೂರಿನ ಖಾಸಗಿ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರಮುಖ ಸಾಕ್ಷಿ ಸಂದೀಪ್‌ನನ್ನು ಜೂನ್ 25ರಂದು ಆಕರ್ಷ್ ಎಂಬಾತ ಮಾತನಾಡಬೇಕೆಂದು ಕರೆದಿದ್ದನು. ಬಳಿಕ ಆತನನ್ನು ಕಾರಿನಲ್ಲಿ ಕೂರಿಸಿಕೊಂಡು ನಾಲ್ವರು ಆರೋಪಿಗಳು ಕೋರ್ಟ್‌ನಲ್ಲಿ

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಬಯಲಾಯ್ತು ಆರೋಪಿಗಳ ಸಂಚು! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗ್ರಾಹಕರಿಗೆ ಶಾಕ್: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಗಣನೀಯ ಏರಿಕೆ!

(ನ್ಯೂಸ್‌ ಕಡಬ) newskadaba.com, ಜು.03 : ಇಂದಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಪ್ರಸ್ತುತ ಮಾರುಕಟ್ಟೆ ದರದ ವಿವರಗಳು ಈ ಕೆಳಗಿನಂತಿವೆ: 22 ಕ್ಯಾರೆಟ್ ಚಿನ್ನ (ಪ್ರತಿ ಗ್ರಾಂಗೆ): ₹13,475 ಬೆಳ್ಳಿ (ಪ್ರತಿ ಗ್ರಾಂಗೆ): ₹245 ಚಿನ್ನದ ಬೆಲೆಯಲ್ಲಿ ಪವನ್‌ಗೆ ₹1,800 ಹಾಗೂ ಬೆಳ್ಳಿ ಬೆಲೆಯಲ್ಲಿ ಪ್ರತಿ ಗ್ರಾಂಗೆ ₹6 ರಷ್ಟು ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.  

ಗ್ರಾಹಕರಿಗೆ ಶಾಕ್: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಗಣನೀಯ ಏರಿಕೆ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪುತ್ತೂರು ಯುವತಿಗೆ ವಂಚನೆ ಪ್ರಕರಣ ತಿಂಗಳ 2ನೇ ತಾರೀಕಿನೊಳಗೆ ಭತ್ಯೆ ನೀಡಲು ಹೈಕೋರ್ಟ್ ಆದೇಶ

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 03. ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿದ ಆರೋಪ ಹೊತ್ತಿರುವ ಕೃಷ್ಣ ಜಿ. ರಾವ್ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಪ್ರಕರಣ ಇತ್ಯರ್ಥವಾಗುವವರೆಗೆ, ಸಂತ್ರಸ್ತೆ ಮತ್ತು ಮಗುವಿನ ಪಾಲನೆಗಾಗಿ ಆರೋಪಿ ಕೃಷ್ಣ ಜಿ. ರಾವ್ ಅಥವಾ ಅವರ ಪೋಷಕರು ಪ್ರತಿತಿಂಗಳ ಎರಡನೇ ದಿನದೊಳಗೆ ₹75,000 ಅನ್ನು ತಪ್ಪದೇ ಪಾವತಿಸಬೇಕು ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಸೂಚಿಸಿದೆ. ​ ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥಪಡಿಸಲು

ಪುತ್ತೂರು ಯುವತಿಗೆ ವಂಚನೆ ಪ್ರಕರಣ ತಿಂಗಳ 2ನೇ ತಾರೀಕಿನೊಳಗೆ ಭತ್ಯೆ ನೀಡಲು ಹೈಕೋರ್ಟ್ ಆದೇಶ Read More »

ಕರಾವಳಿ

ಜಾಲ್ಸೂರು ಮಾಬಲಡ್ಕ ನದಿತೀರದಲ್ಲಿ ವಾಗ್ವಾದ, ಹಲ್ಲೆ: ಸುಳ್ಯ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲು

(ನ್ಯೂಸ್‌ ಕಡಬ) newskadaba.com, ಜು.03 ಜಾಲ್ಸೂರು ಗ್ರಾಮದ ಮಾಬಲಡ್ಕ ನದಿತೀರದಲ್ಲಿ ಯುವಕ ಮತ್ತು ಯುವತಿಯೊಂದಿಗೆ ಸ್ಥಳೀಯರು ವಾಗ್ವಾದ ನಡೆಸಿ, ಅದು ಹಲ್ಲೆಗೆ ತಿರುಗಿದ ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯಿಂದ ಪರಸ್ಪರ ದೂರು-ಪ್ರತಿದೂರು ದಾಖಲಾಗಿವೆ. ಜೂನ್ 30ರಂದು ಜಾಲ್ಸೂರು ಗ್ರಾಮದ ಮಾಬಲಡ್ಕ ನದಿತೀರದಲ್ಲಿ ಈ ಘಟನೆ ನಡೆದಿದೆ.ಜಯನಗರ ನಿವಾಸಿ ಭವಿಷ್ ಅವರು ತಾನು ಸ್ನೇಹಿತೆಯೊಂದಿಗೆ ಫೋಟೋ ತೆಗೆಯುತ್ತಿದ್ದಾಗ ಮೂವರು ಸ್ಥಳೀಯರು ಬಂದು ನಿಂದಿಸಿ, ಮೋಟಾರ್‌ಸೈಕಲ್ ತಡೆದು ಕೀ ಕಸಿದುಕೊಂಡು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ

ಜಾಲ್ಸೂರು ಮಾಬಲಡ್ಕ ನದಿತೀರದಲ್ಲಿ ವಾಗ್ವಾದ, ಹಲ್ಲೆ: ಸುಳ್ಯ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top